ಇನ್ಫೋಸಿಸ್ ಸಿಡಿಸಲು ಸಂಚು ನಡೆಸಿದ್ದ ಉಗ್ರರ ಬಂಧನ
ಮೈಸೂರು : ಗುರುವಾರ ರಾತ್ರಿ ನಡೆದ ಪೊಲೀಸರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಉಗ್ರಗಾಮಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಹಮದ್ ಫಯಾಜ್(24) ಮತ್ತು ಆಲಿಫ್ ಹುಸೇನ್(25) ಎಂದು ಗುರ್ತಿಸಲಾಗಿದೆ.
ನಗರದ ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಮೀಪದ ಇನಕಲ್-ಬೆಂಗಳೂರು ವರ್ತುಲ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಉಗ್ರರು ಪ್ರಯಾಣಿಸುತ್ತಿದ್ದರು. ಉಗ್ರರ ಬೆನ್ನಟ್ಟಿ, ಕೇಂದ್ರ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.
ಇನ್ಫೋಸಿಸ್ ಸೇರಿದಂತೆ ನಗರದ ಪ್ರಮುಖ ಕೈಗಾರಿಕಾ ಕೇಂದ್ರಗಳ ಮೇಲೆ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಉಗ್ರರಿಂದ ಸ್ಯಾಟಲೈಟ್ ಫೋನ್ ಮತ್ತು ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications