ಶುಕ್ರವಾರದಿಂದ ಬೆಂಗಳೂರಿನಲ್ಲಿ 9ನೇ ಐಟಿ ಮೇಳ ಶುರು
ಬೆಂಗಳೂರು : ‘ಬ್ರಾ ್ಯಂಡ್ ಬೆಂಗಳೂರ್ ಈಸ್ ದಿ ಬೆಸ್ಟ್ ’ ಎಂಬ ಘೋಷಣಾ ವಾಕ್ಯದೊಂದಿಗೆ ಒಂಬತ್ತನೆ ಐಟಿ ಮೇಳ ಶುಕ್ರವಾರ ಸಂಜೆ ಅರಮನೆ ಮೈದಾನದಲ್ಲಿ ಅನಾವರಣಗೊಳ್ಳುತ್ತಿದೆ.
ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಶ್ಚಿಮ ಬಂಗಾಳದ ತಂತ್ರಜ್ಞಾನ ಸಚಿವ ಡಾ.ದೇಬೇಷ್ ದಾಸ್ ಮತ್ತು ಬ್ರಿಟನ್ನಿನ ರಾಯಭಾರಿ ಸರ್ ಮೈಕೇಲ್ ಆರ್ಥರ್ ಪಾಲ್ಗೊಳ್ಳಲಿದ್ದಾರೆ.
ಈ ಬಾರಿ 13 ದೇಶಗಳು, 14 ರಾಜ್ಯಗಳ 300ಕ್ಕೂ ಹೆಚ್ಚು ಐಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ರಾಜ್ಯ ಐಟಿ ಕಾರ್ಯದರ್ಶಿ ಎಂ.ಎನ್ ವಿದ್ಯಾಶಂಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಗೋಷ್ಟಿಯಲ್ಲಿ ಎಸ್‌ಟಿಪಿಐ ನಿರ್ದೇಶಕ ಬಿ.ವಿ. ನಾಯ್ಡು ಮತ್ತು ಮುಖ್ಯಮಂತ್ರಿಗಳ ಐಟಿ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶೀಯವಾಗಿ ಪಡೆದುಕೊಂಡಿರುವ ಬೌದ್ಧಿಕ ಆಸ್ತಿ ಹಕ್ಕುಗಳ ತಂತ್ರಜ್ಞಾನಕ್ಕೆ ಈ ಮೇಳ ಒತ್ತುಕೊಡಲಿದೆ. ಪ್ರತೀವರ್ಷದಂತೆ ಈ ಬಾರಿಯೂ ಗ್ರಾಮೀಣ ಐಟಿ ರಸಪ್ರಶ್ನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ರಸಪ್ರಶ್ನೆಯಲ್ಲಿ 9.55 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ನವೆಂಬರ್ 29ರಂದು ನಡೆಯಲಿದೆ. ವಿಜೇತರು ಕ್ರಮವಾಗಿ 65, 35, 20 ಸಾವಿರ ರೂ. ಪಡೆದುಕೊಳ್ಳುತ್ತಾರೆ ಎಂದು ನಾಯ್ಡು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications