ಯತ್ನಾಳ್ ಕಿಡಿನುಡಿ : ಬಿಜೆಪಿ ಬಂಡಾಯ ಮತ್ತೆ ಸ್ಫೋಟ
ಯತ್ನಾಳ್ ಕಿಡಿನುಡಿ : ಬಿಜೆಪಿ ಬಂಡಾಯ ಮತ್ತೆ ಸ್ಫೋಟ
ನಿಷ್ಠಾವಂತರಿಗೆ ಅನ್ಯಾಯ, ಉತ್ತರ ಕರ್ನಾಟಕದ ನಿರ್ಲಕ್ಷ್ಯ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಅಲ್ಲದೆ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದ್ದು, ತೀರಾ ಇತ್ತೀಚೆಗೆ ಪಕ್ಷಕ್ಕೆ ಸೇರಿರುವ ಶೋಭಾ ಕರಂದ್ಲಾಜೆ ಅಂಥವರಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. ಈ ಬಗ್ಗೆ ಯಡಿಯೂರಪ್ಪ ಸ್ಪಷ್ಟೀಕರಣ ನೀಡಬೇಕು ಎಂದು ಸವಾಲೆಸೆದರು.
15 ದಿನಗಳಲ್ಲಿ ಬಿಜೆಪಿ ಶಾಸಕಾಂಗ ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಬದಲಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ಯಡಿಯೂರಪ್ಪ ಧಿಕ್ಕಾರದ ಘೋಷಣೆಗಳನ್ನು ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲರೂ ಕಟ್ಟಿ ಬೆಳೆಸಿದ ಪಕ್ಷವನ್ನು ಯಡಿಯೂರಪ್ಪ ಪ್ರೆೃವೇಟ್ ಲಿಮಿಟೆಡ್ ಕಂಪನಿ ಮಾಡಲು ಹೊರಟಿದ್ದಾರೆ. ಸಂಸದ ಅನಂತ್‌ಕುಮಾರ್ ಅವರೊಂದಿಗೆ ಕೈಜೋಡಿಸಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ. ಯಾವುದೇ ಶಿಸ್ತಿನ ಕ್ರಮಕ್ಕೂ ಹೆದರಲಾರೆ ಎಂದು ಹೇಳಿದ್ದಾರೆ.
ಶಿಸ್ತು ಕ್ರಮ : ಈ ಮಧ್ಯೆ ಸಂಸದ ಬಸನಗೌಡ ಪಾಟೀಲ್ ಯತ್ನಾಳ ಉಪಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ಗುರುವಾರ ಪಕ್ಷದ ಮುಖಂಡರ ಸಭೆ ನಡೆಯಲಿದ್ದು, ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ನಂಬಲರ್ಹ ಮೂಲಗಳು ಹೇಳಿವೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications