ಲೈಂಗಿಕ ಕಾರ್ಯಕರ್ತೆಯರ ಸಮಾವೇಶ : ಹಕ್ಕು ಮಂಡನೆ

ಲೈಂಗಿಕ ಕಾರ್ಯಕರ್ತೆಯರ ಸಮಾವೇಶ : ಹಕ್ಕು ಮಂಡನೆ
ಐಟಿಪಿಎ ತಿದ್ದುಪಡಿಗೆ ಲೈಂಗಿಕ ಕಾರ್ಯಕರ್ತೆಯರ ಒಕ್ಕೂಟದ ಖಂಡನೆ

ಬೆಂಗಳೂರು : ಲೈಂಗಿಕ ಕಾರ್ಯಕರ್ತರಿಗೆ ಮಾರಕವಾಗುವಂತೆ ಕೇಂದ್ರ ಸರ್ಕಾರ ಐಟಿಪಿಎಗೆ ತಿದ್ದುಪಡಿ ತರಲು ಹೊರಟಿರುವುದನ್ನು ಕರ್ನಾಟಕ ಲೈಂಗಿಕ ಕಾರ್ಯಕರ್ತೆಯರ ಒಕ್ಕೂಟ(ಕೆಎಸ್‌ಯು) ವಿರೋಧಿಸಿದೆ.

ಕಾರ್ಮಿಕರ ದಿನದಂದು ನಗರದಲ್ಲಿ ರ್ಯಾಲಿ ಆಯೋಜಿಸಿದ್ದ ಒಕ್ಕೂಟ, ಬನ್ನಪ್ಪ ಪಾರ್ಕ್‌ನಲ್ಲಿ ಬೃಹತ್‌ ಸಮಾವೇಶ ನಡೆಸಿ, ತಮ್ಮ ಬೇಡಿಕೆಗಳನ್ನು ಮಂಡಿಸಿತು ಸುಮಾರು 300ಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಎಲ್ಲ ಕಾರ್ಮಿಕರಂತೆಯೇ ಲೈಂಗಿಕ ಕಾರ್ಯಕರ್ತೆಯರಿಗೂ ಸರ್ಕಾರದ ವಿವಿಧ ಪ್ರಯೋಜನಗಳು ದಕ್ಕ ಬೇಕು ನಾವುಗಳೂ ಸಹಾ ಕಾರ್ಮಿಕರೇ ಎನ್ನುವುದನ್ನು ಸರ್ಕಾರ ಮರೆಯಬಾರದು ಸಾಮಾಜಿಕ ಭದ್ರತೆಯನ್ನು ನಮಗೂ ಒದಗಿಸಬೇಕು ನಮಗೆ ಮತ್ತು ನಮ್ಮ ಗ್ರಾಹಕರಿಗೆ ದಂಡ ವಿಧಿಸುವುದು ಮತ್ತು ಜೈಲಿಗೆ ಕಳುಹಿಸುವಂತಹ ಕಾನೂನುಗಳನ್ನು ಕೈ ಬಿಡಬೇಕು ಎಂಬ ಒತ್ತಾಯ ಲೈಂಗಿಕ ಕಾರ್ಯಕರ್ತೆಯರಿಂದ ಸಮಾವೇಶದಲ್ಲಿ ಕೇಳಿ ಬಂತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+