ಮೇ.4ರಿಂದ 6ರವರೆಗೆ ‘ಲಕ್ಕುಂಡಿ ಸಾಂಸ್ಕೃತಿಕ ಉತ್ಸವ’

ಮೇ.4ರಿಂದ 6ರವರೆಗೆ ‘ಲಕ್ಕುಂಡಿ ಸಾಂಸ್ಕೃತಿಕ ಉತ್ಸವ’
ಉತ್ಸವದಲ್ಲಿ ಹಾಡು, ಕುಣಿತ, ನಾಟಕ, ವಿಚಾರ ಗೋಷ್ಠಿ...

ಗದಗ : ಸಾಂಸ್ಕೃತಿಕ ಹಬ್ಬವಾದ ‘ಲಕ್ಕುಂಡಿ ಉತ್ಸವ’ಕ್ಕೆ ಗದಗ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೇ.4ರಿಂದ 6ರವರೆಗೆ ಉತ್ಸವ ಲಕ್ಕುಂಡಿಯಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಜಿ.ಎಂ.ಧನಂಜಯ ಅವರು ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 6ಸಾವಿರದಿಂದ 8ಸಾವಿರ ಜನರು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌ ಉತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಲಕ್ಕುಂಡಿಯಲ್ಲಿ ಅತ್ತಿಮಬ್ಬೆ ವೇದಿಕೆ ಉತ್ಸವ ಸಂಘಟನೆಗೆ ಮುಂದಾಗಿದೆ.

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಲೇಖಕಿ ವೀಣಾ ಶಾಂತೇಶ್ವರ ಅವರಿಗೆ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು. ನಾಟಕ, ಸಂಗೀತ, ಸಂವಾದ, ವಿಚಾರ ಗೋಷ್ಠಿಗಳು ಉತ್ಸವದಲ್ಲಿ ನಡೆಯಲಿವೆ. ಕೆ.ಎಚ್‌.ಪಾಟೀಲ್‌ ಕ್ರೀಡಾಂಗಣದಲ್ಲಿ ಕರ್ನಾಟಕ ವೈಭವ ಎಂಬ ಧ್ವನಿ ಬೆಳಕಿನ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+