2005ನೇ ಸಾಲಿನ ಕೆಎಎಸ್‌ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

2005ನೇ ಸಾಲಿನ ಕೆಎಎಸ್‌ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ
ಇತಿಹಾಸ ಸೃಷ್ಟಿಸಿದ ಆಯೋಗ, ಕ್ಷಿಪ್ರಗತಿಯಲ್ಲಿ ಪ್ರಕ್ರಿಯೆ ಪೂರ್ಣ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ, 2005ನೇ ಸಾಲಿನ ಕೆಎಎಸ್‌ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಆಯೋಗದ ಇತಿಹಾಸದಲ್ಲೇ ಅತ್ಯಂತ ಕ್ಷಿಪ್ರಗತಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಒಟ್ಟು 153 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಎ ಹಾಗೂ ಬಿ ದರ್ಜೆಯ ಈ ಹುದ್ದೆಗಳು 21 ಇಲಾಖೆಗಳಿಗೆ ಸಂಬಂಧಿಸಿವೆ.

ಆಯೋಗದ ಮುಖ್ಯ ಕಚೇರಿ ಉದ್ಯೋಗಸೌಧದಲ್ಲಿ ಹಾಗೂ ಆಯೋಗದ ಪ್ರಾದೇಶಿಕ ಕಚೇರಿಗಳಲ್ಲಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

2005ನೇ ಸಾಲಿನ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ 82,293 ಅಭ್ಯರ್ಥಿಗಳು ಹಾಜರಾಗಿದ್ದರು. ಇವರ ಪೈಕಿ 759 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆಗಳಿಸಿದ್ದರು.

ಹೆಚ್ಚಿನ ವಿವರಗಳಿಗೆ ಕೆಳಕಂಡ ವೆಬ್‌ಸೈಟ್‌ ಸಂಪರ್ಕಿಸಬಹುದು :
http://kpsc.kar.nic.in

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+