ದಸರಾ ಕವಿಗೋಷ್ಠಿಯಲ್ಲಿ ದಟ್ಸ್‌ಕನ್ನಡ ಕವಿಹೃದಯಿಗಳು!
ಮೈಸೂರು : ಮೈಸೂರಿನಲ್ಲಿ ಸಂಭ್ರಮದ ದಸರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದೆ. ದಸರಾ ಕವಿಗೋಷ್ಠಿಯಲ್ಲಿ ದಟ್ಸ್‌ಕನ್ನಡ ಬಳಗದ ಮೂವರು ಕವಿಗಳು/ಬರಹಗಾರರು ಪಾಲ್ಗೊಳ್ಳುತ್ತಿರುವುದು ದಸರಾ ಸಂಭ್ರಮವನ್ನು ಈ ವರ್ಷ ಮತ್ತಷ್ಟು ಹೆಚ್ಚಿಸಿದೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ(ಅ.8) ಸಂಜೆ 4.30ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕವಿ ಚನ್ನವೀರ ಕಣವಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ದಟ್ಸ್‌ಕನ್ನಡದ 'ಪೂರ್ವ - ಪಶ್ಚಿಮ' ಅಂಕಣಕಾರ ಎಂ.ಆರ್.ದತ್ತಾತ್ರಿ, 'ಹೊಂಬೆಳಕ ಹೊನಲು' ಅಂಕಣಕಾರ ಮೈಸೂರಿನ ಹರಿಹರೇಶ್ವರ ಮತ್ತು ಡಾ.'ಜೀವಿ' ಕುಲಕರ್ಣಿ ಅವರು ಪ್ರಸಕ್ತ ವರ್ಷದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆ ನಿರ್ದೇಶಕ, ಕವಿ ಪ್ರೊ. ಅರವಿಂದ ಮಾಲಗತ್ತಿ ಗೋಷ್ಠಿಯ ಅಧ್ಯಕ್ಷತೆವಹಿಸುವರು. ಸಾ.ಶಿ.ಮರುಳಯ್ಯ, ಜಯಂತ ಕಾಯ್ಕಿಣಿ ಸೇರಿದಂತೆ 29ಕವಿಗಳು ಗೋಷ್ಠಿಯಲ್ಲಿ ಕವನ ವಾಚಿಸುವರು.












Click it and Unblock the Notifications