11ಸಾವಿರವಿದ್ದರೆ ಸಾಕು, ಸಿಂಗಪುರಕ್ಕೆ ಹಾರಬಹುದು!

11ಸಾವಿರವಿದ್ದರೆ ಸಾಕು, ಸಿಂಗಪುರಕ್ಕೆ ಹಾರಬಹುದು!
ಬೆಂಗಳೂರು-ಸಿಂಗಪುರ ನಡುವೆ ವಾರಕ್ಕೆ ಐದು ಬಾರಿ ಸಂಚಾರ ...

ನವದೆಹಲಿ : ದೇಶದಿಂದ ಸಿಂಗಪುರಕ್ಕೆ ಪ್ರಯಾಣಿಸುವವರ ಸಂಖ್ಯೆ ಏರಿಕೆಯಾದ ಹಿನ್ನೆಲೆಯಲ್ಲಿ , ಜೆಟ್‌ಸ್ಟಾರ್‌ ಏಷ್ಯಾವಿಮಾನಯಾನ ಸಂಸ್ಥೆ ಕಡಿಮೆ ದರದಲ್ಲಿ ವಿಮಾನ ಸೇವೆ ನೀಡಲು ಮುಂದಾಗಿದೆ.

ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆನ್‌ ರಿಯಾನ್‌, ಈ ಕುರಿತು ಮಾಹಿತಿ ನೀಡಿದ್ದಾರೆ. ಸಿಂಗಪುರ ಮೂಲದ ಸಂಸ್ಥೆ, ಇನ್ನೊಂದು ವಾರದಲ್ಲೇ ಬೆಂಗಳೂರು ಮತ್ತು ಸಿಂಗಪುರ ನಡುವೆ ಸೇವೆ ಒದಗಿಸಲು ತಯಾರಿ ನಡೆಸಿದೆ. ಈ ಹೊಸ ಸೇವೆಯನ್ನು ಬಜೆಟ್‌ ಏರ್‌ಲೈನ್ಸ್‌ ಎಂದು ಕರೆದಿರುವ ಸಂಸ್ಥೆ, ವಾರದಲ್ಲಿ ಐದು ಬಾರಿ ಹಾರಾಟ ನಡೆಸುವ ಯೋಜನೆ ಹಾಕಿಕೊಂಡಿದೆ.

ಪ್ರಸ್ತುತ ಸಿಂಗಪುರ-ಬೆಂಗಳೂರು ನಡುವೆ ಸಂಚರಿಸಲು ರೂ.23,000 ದಿಂದ ರೂ.27,000(ಒಮ್ಮುಖ ದರ) ತೆರಬೇಕಾಗುತ್ತದೆ. ಆದರೆ ಈ ಹೊಸ ಯೋಜನೆ ಪ್ರಕಾರ, ರೂ.11,000 ಸಾಕಾಗುತ್ತದೆ.

ಕಳೆದ ವರ್ಷ ಕೋಲ್ಕತಾದಲ್ಲಿ ತನ್ನ ಸೇವೆ ಆರಂಭಿಸುವ ಮೂಲಕ, ಭಾರತದ ವಿಮಾನಯಾನ ಕ್ಷೇತ್ರಕ್ಕೆ ಕಾಲಿರಿಸಿತ್ತು. ಇದೀಗ ಅದು ಮಾಹಿತಿ-ತಂತ್ರಜ್ಞಾನ ನಗರಿ ಬೆಂಗಳೂರಿನ ಮೇಲೆ ಕಣ್ಣು ಹಾಕಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+