ಉತ್ತರ ಕನಾಟಕದ ಅಭಿವೃದ್ಧಿಗೆ 1,800 ಕೋಟಿ ನೆರವು
ಉತ್ತರ ಕನಾಟಕದ ಅಭಿವೃದ್ಧಿಗೆ 1,800 ಕೋಟಿ ನೆರವು
ನಿರ್ಲಕ್ಷಿತ ಪ್ರದೇಶಕ್ಕೆ ಹರಿದು ಬರಲಿದೆ ಧನದ ಮಹಾಪೂರ...!
ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ವಾರ್ತಾ ಸಚಿವ ಬಿ.ಶಿವರಾಂ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಂದು ಪಟ್ಟಣ ಪಂಚಾಯತಿ, 4 ಮಹಾನಗರ ಪಾಲಿಕೆಗಳು, 14 ನಗರ ಸಭೆ, 6 ಪಟ್ಟಣ ಸಭೆಗಳು ಈ ಯೋಜನೆಯ ವ್ಯಾಪ್ತಿಗೆ ಸೇರಿವೆ. ಒಟ್ಟು 25 ನಗರ ಹಾಗೂ ಪಟ್ಟಣಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಲು ಈ ನೆರವು ಪಡೆಯಲಾಗುತ್ತಿದೆ.
ಯೋಜನೆಗೆ ವೆಚ್ಚವಾಗುವ ಒಟ್ಟು ಹಣದಲ್ಲಿ ಶೇಕಡಾ 25 ರಷ್ಟನ್ನು ಅಂದರೆ 440 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಭರಿಸಲಿದೆ. ಶೇಕಡಾ 8 ರಷ್ಟು ಮೊತ್ತವನ್ನು ಯೋಜನೆಯ ಲಾಭ ಪಡೆಯುವ ಸಂಸ್ಥೆಗಳು ಭರಿಸಬೇಕಿದೆ ಎಂದು ಶಿವರಾಂ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications