ರಾಜ್ಯದಿ ಬಂಗಾರಪ್ಪನವರ ಸೈಕಲ್ ಸಾಹಸಗಳು ಶುರು
ರಾಜ್ಯದಿ ಬಂಗಾರಪ್ಪನವರ ಸೈಕಲ್ ಸಾಹಸಗಳು ಶುರು
ಸಮಾಜವಾದಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ವಿದ್ಯುತ್, ಆರೋಗ್ಯ, ಶಿಕ್ಷಣ ಎಲ್ಲವೂ ಫ್ರೀ!
ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸಮಾಜವಾದಿ ಪಕ್ಷದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಂಪೂರ್ಣ ಉಚಿತವಾಗಿ ವಿದ್ಯುತ್, ಆರೋಗ್ಯ ಸೇವೆ ಹಾಗೂ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಕಲ್ಪಿಸುವುದಾಗಿ ಘೋಷಿಸಿದರು.
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಎಂದಿನ ಶೈಲಿಯಲ್ಲಿಯೇ ಮಾತನಾಡಿ, ಕಾಂಗ್ರೆಸ್-ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗಕ್ಕೆ ಚಾಲನೆ ನೀಡಲಾಗಿದೆ. ವಿಧಾನಸಭೆ ಚುನಾವಣೆಗಳು ಸದ್ಯದಲ್ಲಿಯೇ ಬರುವ ಸಾಧ್ಯತೆಗಳಿದ್ದು, ಏಪ್ರಿಲ್1ರಿಂದ ರಾಜ್ಯದೆಲ್ಲೆಡೆ ಸಂಘಟನಾ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.
ಮುಲಾಯಂ ಪುತ್ರ ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಶಿಕ್ಷಣ ಸಚಿವ ರಾಮಾಶೈಲೇಶ್ವರ್ ವಿಶ್ವಕರ್ಮ, ಸುನ್ನಿ ಜಮಾತೆ ಧರ್ಮಗುರು ಹಜರತ್ ಸಂಶದ್ ಖಾದ್ರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಸಿಂಗ್, ಚಿತ್ರನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್, ಚಿತ್ರನಟಿ ಹಾಗೂ ಲೋಕಸಭಾ ಸದಸ್ಯೆ ಜಯಪ್ರದಾ, ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷೆ ಲಲಿತಾ ಹೆಗಡೆ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಹರತಾಳ ಹಾಲಪ್ಪ, ಮಾಜಿ ಸಂಸದ ಐ.ಎಂ. ಜಯರಾಮ ಶೆಟ್ಟಿ, ಮಾಜಿ ಶಾಸಕರಾದ ಕೆ.ಪಾಪಣ್ಣ, ರುಕ್ಮಯ್ಯ ಪೂಜಾರಿ, ಕೇಂದ್ರದ ಮಾಜಿ ಸಚಿವ ಸಲೀಂ ಶೆರ್ವಾನಿ, ಮಧು ಬಂಗಾರಪ್ಪ, ಪಿ.ಗೋವಿಂದರಾಜ್, ಎಸ್.ಆರ್.ಖಾನ್, ಪರಮಶಿವಯ್ಯ ಮತ್ತಿತರರು ವೇದಿಕೆಯಲ್ಲಿ ಹಾಜರಿದ್ದರು.
ಬಲಾಬಲಗಳನ್ನು ಪ್ರದರ್ಶನಕ್ಕಿಟ್ಟಂತೆ ಅರಮನೆ ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ಜನಜಾತ್ರೆಯೇ ನೆರೆದಿತ್ತು.
ಇದೊಂದು ಲೆಕ್ಕಾಚಾರ : ಸರ್ವೋದಯ ಕರ್ನಾಟಕ, ಸಂಯುಕ್ತ ಜನತಾದಳ ಮತ್ತು ಸಮಾಜವಾದಿ ಪಕ್ಷಗಳ ತೃತೀಯ ರಂಗ ರಾಜ್ಯದಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳು ಕೇಳಿಬರುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications