ಸ್ಟಾಂಪ್‌ ತೆಲಗಿಯ ಬೆಂಗಳೂರು ಮನೆಗಳು ಹರಾಜ್‌

ಸ್ಟಾಂಪ್‌ ತೆಲಗಿಯ ಬೆಂಗಳೂರು ಮನೆಗಳು ಹರಾಜ್‌
ಫ್ರೇಜರ್‌ ಟೌನ್‌ನಲ್ಲಿರುವ ಕಟ್ಟಡಗಳ ಹರಾಜು ಮುಂದೂಡಿಕೆ, ಆದಾಯ ತೆರಿಗೆ ಇಲಾಖೆ ಲೆಕ್ಕಾಚಾರ ನಡೆಯಲಿಲ್ಲ.

ಬೆಂಗಳೂರು: ಸಾವಿರಾರು ಕೋಟಿ ರೂ.ಗಳ ನಕಲಿ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂಲಾಲ್‌ ತೆಲಗಿಗೆ ಸೇರಿದ ಕಟ್ಟಡವನ್ನು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ(ಫೆ.16) ಹರಾಜು ಹಾಕಿದ್ದಾರೆ.

ನಗರದ ಅರಮನೆ ರಸ್ತೆಯಲ್ಲಿನ ಕಟ್ಟಡವನ್ನು ಪೋಲೀಸರ ಬೆಂಗಾವಲಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು 1.43ಕೋಟಿಗೆ ಹರಾಜು ಹಾಕಿದರು. ಈ ವಾಣಿಜ್ಯ ಬಳಕೆಯ ಕಟ್ಟಡವನ್ನು ನಗರದ ಉದ್ಯಮಿ ಎಂ.ಎನ್‌.ರೆಡ್ಡಿ ಖರೀದಿಸಿದ್ದಾರೆ.

ಅಲ್ಲದೇ ಪ್ರೇಜರ್‌ ಟೌನ್‌ನಲ್ಲಿರುವ ತೆಲಗಿಯ ಉಳಿದ ಎರಡು ಕಟ್ಟಡಗಳನ್ನು ಹರಾಜು ಹಾಕಲು ಪ್ರಯತ್ನಿಸಲಾಯಿತು. ಕನಿಷ್ಠ ಮೊತ್ತವನ್ನು ನಿಗಧಿಪಡಿಸಿದ್ದರೂ ಹರಾಜಿನಲ್ಲಿ ಖರೀದಿಸಲು ಯಾರು ಮುಂದಾಗಲಿಲ್ಲ. 1996ರಿಂದ 2003ರವರೆಗೆ 11.8ಕೋಟಿ ಆದಾಯ ತೆರಿಗೆಯನ್ನು ತೆಲಗಿ ಬಾಕಿ ಉಳಿಸಿಕೊಂಡಿದ್ದರು.

ಅಮ್ಮನ ತಿಥಿ: ಬೆಂಗಳೂರಿನಲ್ಲಿ ಆಸ್ತಿ ಹರಾಜಾಗುತ್ತಿದ್ದರೆ, ಕಳೆದ ತಿಂಗಳು ಮರಣಿಸಿದ ತನ್ನಮ್ಮನ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ತೆಲಗಿ ಬುಧವಾರ ಆಗಮಿಸಿದ್ದ. ಪುಣೆಯ ನ್ಯಾಯಾಲಯ ಈ ಕಾರ್ಯದಲ್ಲಿ ಭಾಗವಹಿಸಲು ತೆಲಗಿಗೆ ಅವಕಾಶ ನೀಡಿತ್ತು.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+