ನಕ್ಸಲರ ಓಲೈಸಿದ ಶ್ರೀಧರ್ ಮೇಲೆ ಎಬಿವಿಪಿ ಸಿಟ್ಟು
ನಕ್ಸಲರ ಓಲೈಸಿದ ಶ್ರೀಧರ್ ಮೇಲೆ ಎಬಿವಿಪಿ ಸಿಟ್ಟು
ಪೋಲೀಸರಿಗಾದ ಗತಿಯೇ ನಿಮಗೂ ಆಗುತ್ತದೆ ಎಂದು ಶ್ರೀಧರ್ ಬೆದರಿಸಿದ್ದಾರೆ: ಆರೋಪ
ಜಯನಗರದ ವಿಜಯ ಕಾಲೇಜಿನ ಮುಂಭಾಗ ಮಂಗಳವಾರ ಬೆಳಿಗ್ಗೆಯಿಂದಲೇ ಎಬಿವಿಪಿ ಕಾರ್ಯಕರ್ತರು, ಹಿಂಸೆಗೆ ಪ್ರಚೋದಿಸುತ್ತಿರುವ ಶ್ರೀಧರ್ ಸೇರಿದಂತೆ ಶಾಂತಿಗಾಗಿ ನಾಗರಿಕ ವೇದಿಕೆ ಕಾರ್ಯಕರ್ತರನ್ನು ಸರ್ಕಾರ ಬಂಧಿಸಬೇಕೆಂದು ಘೋಷಣೆ ಕೂಗುತ್ತ ಪ್ರತಿಭಟಿಸುತ್ತಿದ್ದರು.
ನಂತರ ತರಗತಿಯ ಒಳನುಗ್ಗಿದ ಗುಂಪು ಮತ್ತು ಶ್ರೀಧರ್ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆಗೆ ಕಾರಣವಾಗಿದೆ. ಎಬಿವಿಪಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದು ಶ್ರೀಧರ್ ಪೋಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆಯತ್ನವನ್ನು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಪ್ರೇಮ್ ಪ್ರಸಾದ್ ನಿರಾಕರಿಸಿದ್ದು, ನೀವು ಇಲ್ಲಿಂದ ಹೋಗದಿದ್ದರೆ ಪೋಲೀಸರ ಗತಿಯೇ ನಿಮಗೂ ಆಗುತ್ತದೆ ಎಂದು ಶ್ರೀಧರ್ ನಮ್ಮನ್ನು ಬೆದರಿಸಿದರು ಎಂದು ಆರೋಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications