ಕಾಂಗರೂ ವಿರುದ್ಧ ಸೆಣಸು : ಭಾರತ ತಂಡ ಸಲಹೆಗಾರರಾಗಿ ಗವಾಸ್ಕರ್
ಕಾಂಗರೂ ವಿರುದ್ಧ ಸೆಣಸು : ಭಾರತ ತಂಡ ಸಲಹೆಗಾರರಾಗಿ ಗವಾಸ್ಕರ್
ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಹಿರಿಯ ಆಟಗಾರನಿಂದ ಮಾರ್ಗದರ್ಶನ, ಸ್ಫೂರ್ತಿ ತುಂಬಲು ಬಿಸಿಸಿಐ ತಂತ್ರ
ಅ.6ರ ಬುಧವಾರದಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿದ್ದು, ತಂಡವನ್ನು ಗವಾಸ್ಕರ್ ಮಂಗಳವಾರವೇ ಕೂಡಿಕೊಳ್ಳುವರು ಎಂದು ಬಿಸಿಸಿಐ ಕಾರ್ಯದರ್ಶಿ ಎಸ್.ಕೆ.ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡದ ತರಬೇತುದಾರ ಜಾನ್ ರೈಟ್ ಅವರೇ ಆಗಿರುತ್ತಾರೆ. ಗವಾಸ್ಕರ್ ನೇಮಕದಿಂದಾಗಿ ಜವಾಬ್ದಾರಿಗಳಲ್ಲಿ ಗೊಂದಲಗಳುಂಟಾಗುವುದಿಲ್ಲ . ಗವಾಸ್ಕರ್ ಅವರ ಅಪಾರ ಅನುಭವ ಹಾಗೂ ತಾಂತ್ರಿಕ ಕೌಶಲವನ್ನು ತಂಡ ಬಳಸಿಕೊಳ್ಳಬೇಕು ಎನ್ನುವುದು ಬಿಸಿಸಿಐ ಅಪೇಕ್ಷೆ ಎಂದು ನಾಯರ್ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications