ವಿಜಯಮಲ್ಯ ವಿರುದ್ಧ ಪಕ್ಷದ ಸೋತ 150 ಹುರಿಯಾಳುಗಳ ಬಂಡಾಯ

ವಿಜಯಮಲ್ಯ ವಿರುದ್ಧ ಪಕ್ಷದ ಸೋತ 150 ಹುರಿಯಾಳುಗಳ ಬಂಡಾಯ
ಸೆ.27ರಿಂದ ಮಲ್ಯ ಕಚೇರಿಯೆದುರು ಅಮರಣಾಂತ ಉಪವಾಸ

ಬೆಂಗಳೂರು : ಜನತಾಪಕ್ಷದ ಮುಖಂಡ ಮದ್ಯದ ದೊರೆ ವಿಜಯಮಲ್ಯರ ವಿರುದ್ಧ, ಕಳೆದ ಚುನಾವಣೆಯಲ್ಲಿ ಅವರ ಪಕ್ಷದಿಂದಲೇ ಕಣಕ್ಕಿಳಿದಿದ್ದ 150ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ತಿರುಗಿಬಿದ್ದಿದ್ದಾರೆ.

ಸೆ.27 ರಂದು ವಿಜಯಮಲ್ಯ ಅವರ ಕಚೇರಿ ಬಳಿ ಈ ಎಲ್ಲಾ ಅಭ್ಯರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಹಾ ಮುಂದಾಗಿದ್ದಾರೆ.

ವಿಜಯಮಲ್ಯರ ನಿರಾಸಕ್ತಿ ಹಾಗೂ ಬೇಜಚಿಛಿಬ್ದಾರಿಯ ಪರಿಣಾಮ ಜನತಾಪಕ್ಷ ಅಪ್ರಸ್ತುತವಾಗುತ್ತಿದೆ. ಮಲ್ಯರ ಆಕರ್ಷಕ ವ್ಯಕ್ತಿತ್ವ ಹಾಗೂ ಬಣ್ಣದ ಮಾತುಗಳಿಗೆ ಮರುಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಲಕ್ಷಾಂತರ ರೂ.ಗಳನ್ನು ನಷ್ಟಮಾಡಿಕೊಂಡಿದ್ದೇವೆ. ಪಕ್ಷದ ಏಳ್ಗೆಗಾಗಿ ಅವರು ಶ್ರಮಿಸಬೇಕು ಅಥವಾ ಚುನಾವಣೆಯಲ್ಲಿ ನಾವು ಕಳೆದು ಕೊಂಡಿರುವ ಹಣವನ್ನು ಮರಳಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಕೆಲವರನ್ನು ಹೊರತು ಪಡಿಸಿ ಬಹುದೇಕ ಅಭ್ಯರ್ಥಿಗಳಿಗೆ ವಿಜಯಮಲ್ಯ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಯಂತೆ ಹಣವನ್ನು ನೀಡಿಲ್ಲ . ಮಲ್ಯರನ್ನು ನಂಬಿ ಅಭ್ಯರ್ಥಿಗಳು ಸಾಕಷ್ಟು ಹಣ ಖರ್ಚುಮಾಡಿದ್ದರು. ಚುನಾವಣೆ ನಂತರ ಮಲ್ಯರ ವಂಚನೆಯಿಂದ ಬೇಸತ್ತು ಹೋರಾಟದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+