ಅಯೋಧ್ಯೆ ವಿವಾದಿತ ಕಟ್ಟಡ ಕೆಡವಲು ನಮ್ಮ ವಿರೋಧವಿತ್ತು: ಬಿಜೆಪಿ
ಅಯೋಧ್ಯೆ ವಿವಾದಿತ ಕಟ್ಟಡ ಕೆಡವಲು ನಮ್ಮ ವಿರೋಧವಿತ್ತು: ಬಿಜೆಪಿ
ಲಿಬರ್ಹಾನ್ ಆಯೋಗಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ ಬಿಜೆಪಿ
ಪಕ್ಷ ಮತ್ತು ಪಕ್ಷದ ನಾಯಕರು ವಿವಾದಿತ ಕಟ್ಟಡ ಕೆಡವುವಲ್ಲಿ ಭಾಗಿಯಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ . ಈ ದುರಂತವು ದುರದೃಷ್ಟಕರ ಮತ್ತು ನಿಯಂತ್ರಣ ತಪ್ಪಿದ ಕಾರಣ ನಡೆದಿದೆ. ಬಿಜೆಪಿ ಯಾವತ್ತೂ ಈ ಕಟ್ಟಡ ಕೆಡವಲು ಬಯಸಿಲ್ಲ ಎಂದು ಬಿಜೆಪಿ ಪರ ವಕೀಲ ಸತ್ಯಪಾಲ್ ಜೈನ್ ಹೇಳಿದರು.
ಅವರು ಡಿಸೆಂಬರ್2, 1992ರ ಘಟನೆ ಕುರಿತು ವಿಚಾರಣೆ ನಡೆಸುತ್ತಿರುವ ಲಿಬರ್ಹಾನ್ ಆಯೋಗಕ್ಕೆ ಲಿಖಿತ ವರದಿ ಸಲ್ಲಿಸಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications