ಎಸ್‌ಎಸ್‌ಎಲ್‌ಸಿ 2004 : ನಗರ ವಿದ್ಯಾರ್ಥಿಗಳ ಹಿಂದಿಕ್ಕಿದ ಹಳ್ಳಿಗರು
ಎಸ್‌ಎಸ್‌ಎಲ್‌ಸಿ 2004 : ನಗರ ವಿದ್ಯಾರ್ಥಿಗಳ ಹಿಂದಿಕ್ಕಿದ ಹಳ್ಳಿಗರು
ಎಸ್‌ಎಸ್‌ಎಲ್‌ಸಿ 2004 : ನಗರ ವಿದ್ಯಾರ್ಥಿಗಳ ಹಿಂದಿಕ್ಕಿದ ಹಳ್ಳಿಗರು
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 7ರ ಶುಕ್ರವಾರ ಬಿಡುಗಡೆ ಮಾಡಿತು. ಫಲಿತಾಂಶದ ಮುಖ್ಯಾಂಶಗಳು ಕೆಳಗಿನಂತಿವೆ :
- ಶೇ.56.32ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
- ಫಲಿತಾಂಶದ ಪ್ರಮಾಣ ಕಳೆದ ಬಾರಿಗಿಂತ ಶೇ.0.35 ರಷ್ಟು ಸುಧಾರಿಸಿದೆ.
- 16 ಶೈಕ್ಷಣಿಕ ಜಿಲ್ಲೆಗಳು ಫಲಿತಾಂಶದ ಸಾಧನೆಯಲ್ಲಿ ಸರಾಸರಿ ಸುಧಾರಿಸಿಕೊಂಡಿವೆ.
- ಗ್ರಾಮೀಣ ವಿದ್ಯಾರ್ಥಿಗಳು ಶೇ.57.11 ರಷ್ಟು ಉತ್ತೀರ್ಣರಾಗಿದ್ದರೆ, ನಗರಪ್ರದೇಶದ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣ ಶೇ.55.57.
- ಶೇ.77.27ರ ಸರಾಸರಿಯ ಉಡುಪಿ ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಶೇ.40.46ರ ಸಾಧನೆಯ ಕೋಲಾರ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ (76.5), ಚಿಕ್ಕೋಡಿ (72.23) ಹಾಗೂ ಉತ್ತರ ಕನ್ನಡ (68.75) ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.
- ಅಭ್ಯರ್ಥಿಗಳ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮೇ 31ರೊಳಗೆ ಆಯಾಯ ಶಾಲಾ ಕಾಲೇಜುಗಳಿಗೆ ತಲುಪಲಿವೆ.
2004-05ನೇ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪಠ್ಯ ಬದಲಾಗಲಿದೆ. ಆದರೆ ಪರೀಕ್ಷಾ ಶೈಲಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಡಳಿಯ ನಿರ್ದೇಶಕ ಟಿ.ಎಂ.ಕುಮಾರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications