ಹಿರಿಯ ಸಾಹಿತಿ ಶೇಷನಾರಾಯಣರಿಗೆ ‘ಅನಕೃ-ನಿರ್ಮಾಣ್’ ಪ್ರಶಸ್ತಿ
ಹಿರಿಯ ಸಾಹಿತಿ ಶೇಷನಾರಾಯಣರಿಗೆ ‘ಅನಕೃ-ನಿರ್ಮಾಣ್’ ಪ್ರಶಸ್ತಿ
ಮೇ 31ರಂದು ಗಾನ ಸಮಾಜದಲ್ಲಿ ಪ್ರಶಸ್ತಿ ಪ್ರದಾನ
ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯಂ, ಜಿ.ಎನ್.ರಂಗನಾಥರಾವ್ ಹಾಗೂ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಶೇಷನಾರಾಯಣ ಅವರನ್ನು ಪ್ರತಿಷ್ಠಿತ ಅನಕೃ-ನಿರ್ಮಾಣ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ಅನಕೃ ಪ್ರತಿಷ್ಠಾನ 1995ರಿಂದಲೂ ಅನಕೃ-ನಿರ್ಮಾಣ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮೇ 30ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುವ ಸಮಾರಂಭದಲ್ಲಿ ಶೇಷನಾರಾಯಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 25,001 ರುಪಾಯಿ ನಗದು, ಚಿನ್ನದ ಪದಕ ಹಾಗೂ ಅಭಿನಂದನಾ ಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications