ಒತ್ತಡಕ್ಕೆಮಣಿದ ಸರ್ಕಾರ: ನಾಡಗೀತೆಗೆ ಮಧ್ವಚಾರ್ಯ ಸೇರ್ಪಡೆ
ಒತ್ತಡಕ್ಕೆಮಣಿದ ಸರ್ಕಾರ: ನಾಡಗೀತೆಗೆ ಮಧ್ವಚಾರ್ಯ ಸೇರ್ಪಡೆ
ಪೇಜಾವರ ಶ್ರೀಗೆ ಸಂತೋಷ, ನಿಲುವು ಬದಲಿಸದ ಪೂರ್ಣಚಂದ್ರ ತೇಜಸ್ವಿ
ರಾಜ್ಯ ಸಚಿವ ಸಂಪುಟ ಸಭೆ ತನ್ನ ಶುಕ್ರವಾರದ (ಜ.30) ಸಭೆಯಲ್ಲಿ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹಾಗೂ ಕುಮಾರವ್ಯಾಸರ ಹೆಸರನ್ನು ಸೇರಿಸಲು ತೀರ್ಮಾನಿಸಿತು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ- ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಪುಸ್ತಕದಲ್ಲಿ ಯಾರ್ಯಾರ ಹೆಸರು ಸೇರಿಸಬೇಕು ಎನ್ನುವ ಕುರಿತು ಸ್ವತಃ ಕುವೆಂಪು ಅವರೇ ತಿದ್ದುಪಡಿ ಮಾಡಿದ್ದಾರೆ. ಈ ಪುಸ್ತಕದ ಆಧಾರದ ಮೇಲೆಯೇ ನಾಡಗೀತೆಯಲ್ಲಿ ಮಧ್ವರ ಹೆಸರು ಸೇರಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಪೇಜಾವರ ಶ್ರೀಗೆ ಸಂತೋಷ, ತೇಜಸ್ವಿಗೆ ಜಿಗುಪ್ಸೆ
ನಾಡಗೀತೆಯಲ್ಲಿ ಮಧ್ವರ ಹೆಸರನ್ನು ಸೇರಿಸಿರುವ ಸರ್ಕಾರದ ನಿರ್ಧಾರವರ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸರ್ಕಾರವು ನ್ಯಾಯಯುತವಾದ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ ತಮಗೆ ಸಂತೋಷವಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೆ ತಮ್ಮ ವಿರೋಧ ಈಗಲೂ ಇದೆ ಎಂದು ಪ್ರತಿಕ್ರಿಯಿಸಿರುವ ಪೂರ್ಣಚಂದ್ರ ತೇಜಸ್ವಿ- ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೆ ಕುವೆಂಪು ಒಪ್ಪಿದ್ದರು ಎನ್ನುವ ಕುರಿತು ಸರ್ಕಾರದ ಬಳಿ ದಾಖಲೆ ಇರಬಹುದು, ಆ ವಿಷಯ ನನಗೆ ಗೊತ್ತಿಲ್ಲ ಎಂದರು. ನಾಡಗೀತೆಯ ಜಗಳವನ್ನು ಅನೇಕರು ಬೀದಿಗೆ ತಂದು ರಂಪ ಮಾಡಿದರು. ಈ ಜಗಳ ಅಸಹ್ಯಕರವಾಗಿದೆ ಎಂದು ತೇಜಸ್ವಿ ಹೇಳಿದರು.
ನಾಡಗೀತೆಯಲ್ಲಿ ಸೇರಲು ನನ್ನ ಪ್ರಕಾರ ಅರ್ಹವಾದ ನಾಲ್ಕೇ ನಾಲ್ಕು ಹೆಸರುಗಳೆಂದರೆ- ಗೌತಮ, ಬಸವಣ್ಣ , ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿ ಎಂದು ತೇಜಸ್ವಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications