2004 ರ ಕಾವೇರಿನೀರಿನ ಕಿರಿಕಿರಿಗೆ ತಮಿಳುನಾಡು ರೈತರ ಮುನ್ನುಡಿ
2004 ರ ಕಾವೇರಿನೀರಿನ ಕಿರಿಕಿರಿಗೆ ತಮಿಳುನಾಡು ರೈತರ ಮುನ್ನುಡಿ
10 ಟಿಎಂಸಿ ನೀರು ಕೊಡುವಂತೆ ಕೃಷ್ಣರಿಗೆ ತಮಿಳುನಾಡು ರೈತರ ಮೊರೆ
ತಮಿಳುನಾಡಿನ ರೈತರ ಜಂಟಿ ನಿಯೋಗವೊಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಭೇಟಿಯಾಗಿ ಕಾವೇರಿ ನೀರಿಗೆ ವಿನಂತಿಸುವ ಮೂಲಕ, 2004 ನೇ ಇಸವಿಯ ನೀರಿನ ಕಿರಿಕಿರಿಯ ಮೊದಲ ಅಧ್ಯಾಯ ಪ್ರಾರಂಭವಾದಂತಾಯಿತು. ತಮಿಳುನಾಡು ಕಾವೇರಿ ಪ್ರದೇಶದ ರೈತರ ಹಿತಾಸಕ್ತಿ ಸಮಿತಿ- ತಂಜಾವೂರು, ತಿರುಚನಾಪಳ್ಳಿ ಜಿಲ್ಲಾ ಕಾವೇರಿ ರೈತರ ಹಿತಾಸಕ್ತಿ ಸಮಿತಿ ಹಾಗೂ ಕರೂರಿನ ಸಂಘಟನೆಗಳ ಪ್ರತಿನಿಧಿಗಳು ಜ.14ರಂದು ಮುಖ್ಯಮಂತ್ರಿ ಕೃಷ್ಣ ಅವರು ಭೇಟಿ ಮಾಡಿ ನೀರಿನ ಹಂಚಿಕೆಯ ಕುರಿತು ಮಾತುಕತೆ ನಡೆಸಿದರು.
ಕೃಷಿಯ ಅಗತ್ಯಗಳಿಗನುಸಾರ 10 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕೃಷ್ಣ ತಮಗೆ ಭರವಸೆ ನೀಡಿರುವುದಾಗಿ, ರೈತರ ಸಂಘಟನೆಗಳ ನೇತೃತ್ವ ವಹಿಸಿದ್ದ ತಮಿಳುನಾಡಿನ ಕರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಎನ್.ಶಿವಸುಬ್ರಹ್ಮಣ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನೀರಿನ ಕೊರತೆಯಿರುವ ಕುರಿತು ಮುಖ್ಯಮಂತ್ರಿ ಕೃಷ್ಣ ತಿಳಿಸಿದರು. ನಾವು ಪ್ರತಿದಿನ 2000 ಕ್ಯುಸೆಕ್ಸ್ನಂತೆ 10 ಟಿಎಂಸಿ ನೀರಿಗೆ ಬೇಡಿಕೆ ಮಂಡಿಸಿದ್ದೇವೆ ಎಂದು ಶಿವಸುಬ್ರಹ್ಮಣ್ಯ ಹೇಳಿದರು.
ಈಗಿನ್ನೂ ಜನವರಿಯ ಮಧ್ಯಭಾಗ ; ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ........ ಶಿವಶಿವಾ, ಚುನಾವಣೆಗಳು ಬೇರೆ ಹೊಸ್ತಿಲಲ್ಲಿವೆ !
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications