‘ವಿಜಯ ಕರ್ನಾಟಕ- ಅಂಕಿತ ಪುಸ್ತಕ ಯುಗಾದಿ ಕಥಾಸ್ಪರ್ಧೆ-04’
‘ವಿಜಯ ಕರ್ನಾಟಕ- ಅಂಕಿತ ಪುಸ್ತಕ ಯುಗಾದಿ ಕಥಾಸ್ಪರ್ಧೆ-04’
ಕಥೆ........ ಸೋಜಿಗದ ಬದುಕನ್ನು ಅರಿಯುವ ಸೊಗಸಾದ ವಿಧಾನ
ಕನ್ನಡ ಕಥಾಲೋಕದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಸಮಯ !!
2004ನೇ ಇಸವಿಯ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಪ್ರಕಟಣೆ ಇದೀಗ ಹೊರಬಿದ್ದಿದ್ದು , ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 5, 2004. ಬಹುಮಾನಗಳ ವಿವರ :
ಮೊದಲ ಬಹುಮಾನ- 25000 ರೂ.
ಎರಡನೇ ಬಹುಮಾನ- 20000 ರೂ.
ಮೂರನೇ ಬಹುಮಾನ- 15000 ರೂ.
ಸ್ಪರ್ಧೆಯ ನಿಯಮಗಳು :
- ಕಥೆ ಸ್ವತಂತ್ರ ಕೃತಿಯಾಗಿರಬೇಕು. ಅನುವಾದ, ಸ್ಫೂರ್ತಿ ಆಧಾರಿತವಲ್ಲ.
- ಹಿಂದೆಲ್ಲೂ ಯಾವ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು.
- 2500 ಪದಗಳ ಮೀರುವಂತಿಲ್ಲ .
- ಕತೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆಯಿರಿ.
- ನಿಮ್ಮ ಹೆಸರು, ವಿಳಾಸ ಪ್ರತ್ಯೇಕ ಬಿಳಿಹಾಳೆಯಲ್ಲಿ ಬರೆಯಿರಿ.
- ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತವೆ.
- ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳ ಸ್ವಾಮ್ಯ ವಿಜಯ ಕರ್ನಾಟಕ-ಅಂಕಿತ ಪುಸ್ತಕದ್ದು .
- ಕಥೆಗಳನ್ನು ಹಿಂತಿರುಗಿಸುವುದಿಲ್ಲ .
ಕಥೆ ಕಳುಹಿಸುವ ವಿಳಾಸ :
ವಿಜಯ ಕರ್ನಾಟಕ (ಯುಗಾದಿ ಕಥಾಸ್ಪರ್ಧೆ ವಿಜ್ಞಾಗ), ನಂ.4, ಪಂಪ ಮಹಾಕವಿ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 560018. ವಿಜಯಕರ್ನಾಟಕ
ಇ-ಮೇಲ್ : [email protected]
ಫ್ಯಾಕ್ಸ್ : 80-91-2971157/58
ಶುಭವಾಗಲಿ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!
ಮುಖಪುಟ / ವಾರ್ತೆಗಳು












Click it and Unblock the Notifications