Get Updates
Get notified of breaking news, exclusive insights, and must-see stories!

‘ಏನ ಬಲ್ಲೆನು ನಾನು ಮಿಗೆ ಸುಜ್ಞಾನ ಮೂರುತಿ ನೀನು......’

‘ಏನ ಬಲ್ಲೆನು ನಾನು ಮಿಗೆ ಸುಜ್ಞಾನ ಮೂರುತಿ ನೀನು......’

ಪ್ರಿಯ ಶಾಮ್‌,

ಬಸವರಾಜು ಅವರ ಪತ್ರ ಓದಿದೆ. ಅದರಲ್ಲಿ ಬಸವರಾಜು ಪತ್ರಕರ್ತರನ್ನೂ ಸೇರಿಸಿಕೊಂಡಿದ್ದಾರೆ. ತಮಾಷೆಯೋ ದುರಂತವೋ ಗೊತ್ತಿಲ್ಲ, ಈ ದೇಶದಲ್ಲಿ ಎಲ್ಲರಿಗೂ ಹೆಸರಿಡುವವರು ಪತ್ರಕರ್ತರು ಎಂಬ ಅಭಿಪ್ರಾಯ ಎಲ್ಲೆಲ್ಲೂ ಚಾಲ್ತಿಯಲ್ಲಿದೆ. ವಿಷ್ಣುವರ್ಧನ್‌ ಅವರಿಗೆ ಸಾಹಸಸಿಂಹ ಎಂದು ಬಿರುದುಕೊಟ್ಟದ್ದೂ ರಾಜ್‌ಕುಮಾರ್‌ರನ್ನು ನಟಸಾರ್ವಭೌಮ ಮಾಡಿದ್ದೂ ಪತ್ರಕರ್ತರೇ ಅಂತ ಅನೇಕರು ಅಂದುಕೊಂಡಿದ್ದಾರೆ. ಹಾಗೇ ಜಿ.ಕೆ.ಗೋವಿಂದರಾಯರನ್ನು ಜಿ. ರಾಮಕೃಷ್ಣರನ್ನೂ ಎಚ್‌. ನರಸಿಂಹಯ್ಯರನ್ನೂ ವಿಚಾರವಾದಿ ಎಂದು ಕರೆದದ್ದು ಪತ್ರಕರ್ತರೇ ಎಂದು ಭಾವಿಸಿ ಬಸವರಾಜು ಬರೆದಿದ್ದಾರೆ.

ಬಸವರಾಜು ಅವರಂಥ ಓದುಗರಿಗೆ ಜಿಕೆ ಗೋವಿಂದರಾಯರು ವಿಚಾರವಾದಿ ಅನ್ನುವುದು ಗೊತ್ತಾಗುವುದು ಪತ್ರಿಕೆಗಳ ಮೂಲಕ ನಿಜ. ಆದರೆ ಪತ್ರಿಕೆಗಳಿಗೆ ಅವರು ವಿಚಾರವಾದಿ ಅನ್ನುವುದು ಹೇಗೆ ಗೊತ್ತಾಗುತ್ತದೆ?

ಅದನ್ನು ಹೇಳುವುದು ಅವರು ಭಾಗವಹಿಸುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು. ಸಾಮಾನ್ಯವಾಗಿ ಯಾವ ವರದಿಗಾರನೂ ಜಿ. ಕೆ. ಗೋವಿಂದರಾಯರನ್ನು ‘ನೀವು ಇಂತಿಂಥಾ ವಿಚಾರದ ಬಗ್ಗೆ ಏನು ಹೇಳುತ್ತೀರಿ’ ಎಂದು ಕೇಳುವುದಕ್ಕೆ ಹೋಗುವುದಿಲ್ಲ. ಬದಲಾಗಿ ಅವರು ಭಾಗವಹಿಸಿದ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಅವರು ಮಾಡಿದ ಭಾಷಣದ ವರದಿ ಮಾಡುತ್ತಾನೆ. ಹಾಗೆ ವರದಿ ಮಾಡುವ ಹೊತ್ತಿಗೆ ಆತನ ಕೈಯಲ್ಲಿ ಅಂದಿನ ಸಮಾರಂಭದ ಆಹ್ವಾನ ಪತ್ರಿಕೆಯೂ ಇರುತ್ತದೆ. ಅದರಲ್ಲಿ ಜಿ. ಕೆ. ಗೋವಿಂದರಾಯರನ್ನು ವಿಚಾರವಾದಿ ಎಂದು ನಮೂದಿಸಿರುತ್ತಾರೆ.

ಸರಿ. ಹಾಗಿದ್ದರೆ ವಿಚಾರವಾದಿ ಅನ್ನುವ ಬಿರುದನ್ನು ಕಾರ್ಯಕ್ರಮದ ಸಂಯೋಜಕರು ಕೊಟ್ಟರು ಎಂದಂತಾಯಿತು. ಅವರಿಗಾದರೂ ಜಿ.ಕೆ.ಗೋವಿಂದರಾಯರು ವಿಚಾರವಾದಿ ಎನ್ನುವುದು ಹೇಗೆ ತಿಳಿಯಿತು?

ಅದರ ಮೂಲ ಹುಡುಕುವುದು ಸುಲಭ. ಸಂಯೋಜಕರು ಜಿ.ಕೆ. ಗೋವಿಂದರಾಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋಗಿದ್ದಾರೆ. ಅವರು ಡೈರಿ ನೋಡಿ ಒಪ್ಪಿಕೊಂಡಿದ್ದೂ ಆಗಿದೆ. ಒಪ್ಪಿಕೊಂಡ ನಂತರ ‘ಹಾಗಿದ್ರೆ ಇನ್‌ವಿಟೇಷನ್‌ ಪ್ರಿಂಟ್ಹಾಕ್ತೀವಿ ಸಾರ್‌’ ಅನ್ನುತ್ತಾರೆ ಸಂಯೋಜಕರು. ‘ಹುಂ’ ಅಂತ ಗುರುಗುಟ್ಟಿರುತ್ತಾರೆ ಗೋವಿಂದರಾಯರು. ತಮ್ಮನ್ನು ಏನೂಂತ ಹಾಕ್ಲಿ ಅಂತ ಕೇಳಿರುತ್ತಾರೆ ಇವರು. ಅದಕ್ಕೆ ಗೋವಿಂದರಾಯರು ವಿಚಾರವಾದಿ ಎಂದಿರುತ್ತಾರೆ.

ಇದೊಂದು ಊಹೆ ಅಷ್ಟೇ. ಗೋವಿಂದರಾಯರು ಹೇಳಿರದಿದ್ದರೆ ಇನ್ಯಾರೋ ಹೇಳಿರುತ್ತಾರೆ. ಒಂದು ಸಮಾರಂಭದಲ್ಲಿ ಗೋವಿಂದರಾಯರು ವಿಚಾರವಾದಿ ಅಂತ ಗುರುತಿಸಲ್ಪಟ್ಟ ನಂತರ ಅವರ ಅಸ್ತಿತ್ವ ಬದಲಾಗುವುದಕ್ಕೆ ಸಾಧ್ಯವೇ ಇಲ್ಲ. ಅವರು ಎಂದಿದ್ದರೂ ವಿಚಾರವಾದಿಯೇ. ಹಾಗಂತ ಎಲ್ಲ ಆಹ್ವಾನ ಪತ್ರಿಕೆಗಳಲ್ಲೂ ಮುದ್ರಿತವಾಗಿರುತ್ತವೆ. ಪತ್ರಿಕೆಗಳು ಅದನ್ನು ಬರೆಯದೇ ವಿ-ಧಿಯಿಲ್ಲ.

ಆದರೆ, ವರದಿಗಳಲ್ಲಿ ಬಂದಿದ್ದನ್ನಷ್ಟೇ ಬಸವರಾಜು ಅವರು ಗಮನಿಸಿದಂತೆ ಕಾಣುತ್ತದೆ. ಆದರೆ ಜಿ. ಕೆ. ಗೋವಿಂದರಾಯರ ಸಂದರ್ಶನವೋ, ಅವರ ಬಗ್ಗೆ ಲೇಖನವೋ ಒಂದು ಪತ್ರಿಕೆಯ ಫೀಚರ್ಸ್‌ ವಿಭಾಗದಲ್ಲಿ ಪ್ರಕಟಗೊಂಡರೆ ಅಲ್ಲಿ ಅವರ ಬಗ್ಗೆ ಬರೆದಾತ ಅವರನ್ನು ಕೊಂಚವಾದರೂ ಮೌಲ್ಯಮಾಪನ ಮಾಡಿರುತ್ತಾನೆ. ಹೀಗಾಗಿ ಆತನಿಗೆ ಅವರ ಬಗ್ಗೆ ಏನಾದರೂ ಹೇಳುವ ಅ-ಧಿಕಾರವೂ ಇರುತ್ತದೆ. ಅದು ಬಿಟ್ಟು ಕೇವಲ ವರದಿಯನ್ನು ಆಧರಿಸಿ ಯಾವ ತೀರ್ಮಾನಕ್ಕೆ ಬರುವುದೂ ಸರಿಯಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಕೆಲವು ದಶಕಗಳ ಹಿಂದೆ ನಾಸ್ತಿಕರನ್ನೆಲ್ಲ ವಿಚಾರವಾದಿ ಎಂದು ಕರೆಯುವ ಚಾಳಿ ಶುರುವಾಯಿತು. ವಿಚಾರವಾದಿ ಅಬ್ರಹಾಂ ಕೋವೂರ್‌, ವಿಚಾರವಾದಿ ನರೇಂದ್ರ ನಾಯಕ್‌, ವಿಚಾರವಾದಿ ಜಿ.ಕೆ. ಗೋವಿಂದರಾವ್‌ ಎಂದು ದೇವರನ್ನು ನಂಬದವರನ್ನೆಲ್ಲ ಈ ಹೆಸರಿನಿಂದ ಕರೆಯೋದಕ್ಕೆ ಆರಂಭಿಸಿದರು.

ಅದ್ಯಾಕೆ ಹಾಗೋ ಗೊತ್ತಿಲ್ಲ. ದೇವರನ್ನು ನಂಬದಿರುವುದೇ ಒಂದು ವಿಚಾರವೇ. ನಂಬುವುದು ವಿಚಾರವೇ ಅಲ್ಲವೇ?

ಕನಕದಾಸರ ಒಂದು ಪದ್ಯದಲ್ಲಿ ಬರುವ ಸಾಲು ಹೀಗಿದೆ;

ದೀನ ನಾನು ಸಮಸ್ತಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ಮಿಗೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೆ ದೇವ ರಕ್ಷಿಸು ನಮ್ಮನನವರತ

ಇಲ್ಲಿ ಬರುವ ವಿಚಾರಿಸಲು ಮತಿಹೀನ ನಾನು ಎನ್ನುವ ಪದದ ಅರ್ಥ ಏನಿರಬಹುದು? ವಿಚಾರಿಸುವವರು- ಅರ್ಥಾತ್‌ ವಿಚಾರವಾದಿಗಳು ಮತಿಹೀನರು ಎಂದೇ?

ಈ ತಮಾಷೆಯನ್ನು ಬಿಟ್ಟು ನೋಡುವುದಾದರೆ ಇಂಗ್ಲಿಷ್‌ನ Rationalist ಎಂಬ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ವಿಚಾರವಾದಿ ಎಂಬ ಪದ ಬಳಕೆಯಲ್ಲಿದೆ. ಅತಿಮಾನುಷವಾದ ಯಾವ ಶಕ್ತಿಯೂ ಇಲ್ಲ, ಯಾವ ಅರಿವೂ ಇಲ್ಲ. ನಮ್ಮ ಎಲ್ಲ ನಡವಳಿಕೆಗಳಿಗೂ ಕಾರ್ಯಕಾರಣ ಸಂಬಂಧ ಇದೆ ಎಂದು ನಂಬುವುದು ವಿಚಾರವಾದ ಅಥವಾ ರ್ಯಾಷನಲಿಸಮ್ಮು.

ಇನ್ನು ವಿಚಾರವಾದಿ ಅಂದರೇನು ಅನ್ನುವುದು ಬಸವರಾಜು ಊಹೆಗೆ ಬಿಟ್ಟದ್ದು.

ಏನನ್ನುತ್ತೀರಿ ಶಾಮ್‌.

ನಿಮ್ಮ,
- ಜೋಗಿ

Sunday, 16 November, 2003
10:10:41 PM

What others say...

I am responding for the "vichaaravaadi" letter by Basavaraju B k published on Nov 11th.
Dear Basavaraju,
per se, no title would be true in its literary meaning or derived meaning. Titles such as lekhaka, patrakartha, raajakaarani, is also debatable. For that matter if one gets down to mud slinging...even names of the individuals might as well be used for ones purpose. Hence, it may be a better idea to dispute the "vichaara" what these individuals propose, instead of resorting to such vague/abstract write up.
inthi nimma vishwaasi,
Jaideva,
Orlando, Florida.


Respected editor,
I really stand for Mr.Basavaraju, he is very correct. Even the same doubt I use to have every time, when I happen to read these (a)vicharavaadis stupid commentary. Unfortunately, who ever can be these (a)vichaaravaadi by constantly abusing one and only section that is hindus of the society and more over these (a)vicharavaadis dont have dare to talk about any most negative points about the other community. The press should first strongly check whether these people are right or wrong........before publishing anything.
regards
Narendra p Sastry

Post your views

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+