ಕಾರಂತರ ಏಳು ಯಕ್ಷಗಾನ ಬ್ಯಾಲೆಗಳು ಮಾಲಿನಿ ಮಲ್ಯರ ಸೊತ್ತು

ಕಾರಂತರ ಏಳು ಯಕ್ಷಗಾನ ಬ್ಯಾಲೆಗಳು ಮಾಲಿನಿ ಮಲ್ಯರ ಸೊತ್ತು
ಉಡುಪಿ ಜಿಲ್ಲಾ ನ್ಯಾಯಾಲಯದ ಮಹತ್ವದ ಆದೇಶ

ಉಡುಪಿ : ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತ ಅವರ ಏಳು ಯಕ್ಷಗಾನ ಬ್ಯಾಲೆಗಳನ್ನು ಪ್ರದರ್ಶಿಸದಂತೆ ಉಡುಪಿ ಜಿಲ್ಲಾ ನ್ಯಾಯಾಲಯ ಮಹಾತ್ಮಾ ಗಾಂಧಿ ಮೆಮೋರಿಯಲ್‌ (ಎಂಜಿಎಂ) ಕಾಲೇಜಿನ ಯಕ್ಷಗಾನ ಕೇಂದ್ರಕ್ಕೆ ಶಾಶ್ವತ ತಡೆಯಾಜ್ಞೆ ನೀಡಿದೆ.

ಕಲೆ, ಸಾಹಿತ್ಯ, ಸೃಜನಾತ್ಮಕ ಚಟುವಟಿಕೆಯ ಏಕೈಕ ಹಕ್ಕುದಾರಳು ಮಾಲಿನಿ ಮಲ್ಯ ಎಂದು ಶಿವರಾಮ ಕಾರಂತರು ತಮ್ಮ ಉಯಿಲಿನಲ್ಲಿ ತಿಳಿಸಿದ್ದು , ಈ ಹಕ್ಕುಗಳನ್ನು ರಕ್ಷಿಸಿಕೊಡುವಂತೆ ಕಾರಂತರ ಆಪ್ತ ಕಾರ್ಯದರ್ಶಿಯಾಗಿದ್ದ ಮಾಲಿನಿ ಮಲ್ಯ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಯಕ್ಷಗಾನ ಕೇಂದ್ರ ಪ್ರದರ್ಶಿಸುತ್ತಿದ್ದ ಬ್ಯಾಲೆಗಳಿಗೆ ತಡೆಯಾಜ್ಞೆ ವಿಧಿಸುವಂತೆ ಎರಡು ವರ್ಷಗಳ ಹಿಂದೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಭೀಷ್ಮ ವಿಜಯ, ನಳ ದಮಯಂತಿ, ಕನಕಾಂಗಿ ಕಲ್ಯಾಣ, ಅಭಿಮನ್ಯು, ಚಿತ್ರಾಂಗದಾ, ಪಂಚವಟಿ ಹಾಗೂ ಗಯ ಚರಿತ್ರೆ ಯಕ್ಷಗಾನಗಳ ಹಕ್ಕುಗಳು ಮಾಲಿನಿ ಮಲ್ಯ ಅವರಿಗೆ ಸೇರಿದ್ದು , ಇವುಗಳನ್ನು ಅನುಮತಿಯಿಲ್ಲದೆ ಪ್ರದರ್ಶಿಬಾರದೆಂದು ಕೋರ್ಟ್‌ ಆದೇಶಿಸಿದೆ.

ಶಿವರಾಮ ಕಾರಂತರು ಯಕ್ಷಗಾನ ಕೇಂದ್ರದಲ್ಲಿ ಪದಾಧಿಕಾರಿಯಾಗಿದ್ದಾಗ ಕೆಲವು ಬ್ಯಾಲೆಗಳನ್ನು ತರಬೇತಿ ಸಂದರ್ಭದಲ್ಲಿ ಸಿದ್ಧಪಡಿಸಿದ್ದರು. ಅದರ ಹಕ್ಕು ಸಂಸ್ಥೆಗೆ ಸೇರಿದ್ದು ಎಂದು ಕೇಂದ್ರವು ವಾದಿಸಿತ್ತು. ಆದರೆ ಆ ಸಂದರ್ಭದಲ್ಲಿ ಕಾರಂತರು ಸಂಬಳ, ಸಾರಿಗೆ ಭತ್ಯೆಗಳನ್ನು ಪಡೆದಿಲ್ಲವಾದ್ದರಿಂದ ತರಬೇತಿಯನ್ನು ಗೌರವ ಸೇವೆ ಎಂದು ಪರಿಗಣಿಸಬೇಕು. ಸಂಸ್ಥೆಯು ಆ ಬ್ಯಾಲೆಗಳ ಹಕ್ಕನ್ನು ಹೊಂದಬಾರದು ಎಂದು ಮಾಲಿನಿ ಮಲ್ಯ ಪರ ವಕೀಲರು ವಾದಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+