ಆನ್‌ಲೈನ್ ಲಾಟರಿ ನಿಷೇಧವು ಬೇಡಯ್ಯ ಕೃಷ್ಣನೇ-ಪ್ಲೇವಿನ್ ಮೊರೆ
ಆನ್‌ಲೈನ್ ಲಾಟರಿ ನಿಷೇಧವು ಬೇಡಯ್ಯ ಕೃಷ್ಣನೇ-ಪ್ಲೇವಿನ್ ಮೊರೆ
ಆನ್‌ಲೈನ್ ಲಾಟರಿ ವಿರುದ್ಧ ಅನಧಿಕೃತ ಲಾಟರಿಗಳ ಷಡ್ಯಂತ್ರದ ಆರೋಪ
ಆನ್‌ಲೈನ್ ಲಾಟರಿ ನಿಷೇಧದಿಂದ ರಾಜ್ಯದಲ್ಲಿ ಅನಧಿಕೃತ ಲಾಟರಿಗಳು ತಲೆಯೆತ್ತಲು ಅವಕಾಶವಾಗುತ್ತದೆ. ಆ ಕಾರಣದಿಂದಾಗಿ ಕಾನೂನುಬದ್ಧ ಆನ್‌ಲೈನ್ ಲಾಟರಿಯನ್ನು ನಿಷೇಧಿಸುವುದು ಬೇಡ ಎಂದು ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ಲೇವಿನ್ ವಿತರಕರು ಮಾರಾಟಗಾರರ ನಿಯೋಗ ಎಸ್ಸೆಂ.ಕೃಷ್ಣ ಅವರನ್ನು ಒತ್ತಾಯಿಸಿತು.
ಕಾನೂನು ಬದ್ಧ ಲಾಟರಿಯ ನಿಷೇಧದಿಂದ ಕಾಳಸಂತೆಯಲ್ಲಿ ಅನಧಿಕೃತ ಲಾಟರಿಗಳು ನಾಯಿಕೊಡೆಯಂತೆ ತಲೆಯೆತ್ತುತ್ತವೆ ಎಂದು ಮುಖ್ಯಮಂತ್ರಿಗಳ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಓರ್ವ ಲಾಟರಿ ಡೀಲರ್ ಕೃಷ್ಣಭಟ್ ತಿಳಿಸಿದರು.
ಆನ್‌ಲೈನ್ ಲಾಟರಿಯ ವಿರುದ್ಧ ಅನಧಿಕೃತ ಲಾಟರಿಗಳು ಒಟ್ಟಾಗಿ ಸಂಚು ಹೂಡಿವೆ. ಆದರೆ, ಸುಪ್ರಿಂಕೋರ್ಟ್‌ನ ತೀರ್ಪಿನ ಅನ್ವಯ ಲಾಟರಿ ನಿಷೇಧದ ಬಗ್ಗೆ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುವಂತಿಲ್ಲ . ಆನ್‌ಲೈನ್ ಲಾಟರಿಯನ್ನು ನಿಷೇಧಿಸಿದಲ್ಲಿ ಪೇಪರ್ ಲಾಟರಿಯನ್ನೂ ನಿಷೇಧಿಸುವುದು ಅನಿವಾರ್ಯವಾಗುತ್ತದೆ ಎಂದು ವಿತರಕರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications