ಮಗುವಿನ ಜೀವಕ್ಕೆ ಪರಿತಪಿಸುವ ಅಮ್ಮನ ನೆರವಿಗೆ ನ್ಯಾಯಾಲಯ
ಮಗುವಿನ ಜೀವಕ್ಕೆ ಪರಿತಪಿಸುವ ಅಮ್ಮನ ನೆರವಿಗೆ ನ್ಯಾಯಾಲಯ
ಸಂಯೋಗಿತಾ ಗಂಡ ನಾರಾಯಣ ರೆಡ್ಡಿಗೆ ಜಾಮೀನು ರಹಿತ ಬಂಧನ ವಾರಂಟ್
ಮಗು ಶ್ರೇಯಾಳ ಪ್ರಾಣ ಉಳಿಸಿಕೊಳ್ಳಬೇಕಿದ್ದರೆ 45 ದಿನಗಳೊಳಗೆ ಮೂಳೆ ಸಾರ ಬದಲಾವಣೆಯ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ವೈದ್ಯರು ಸಂಯೋಗಿತಾಗೆ ಸೂಚಿಸಿದ್ದಾರೆ. ಸಂಯೋಗಿತಾ ಮತ್ತು ಮಗುವಿನ ರಕ್ತದ ಗುಂಪು ಬೇರೆಯಾಗಿರುವುದರಿಂದ ಶಸ್ತ್ರ ಚಿಕಿತ್ಸೆಗೆ ಗಂಡನ ಅಗತ್ಯವಿದ್ದರೂ ಆತ ಅಮೆರಿಕಾದಿಂದ ಬರಲೊಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಯೋಗಿತಾ ನ್ಯಾಯಾಲಯ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊರೆ ಹೋಗಿದ್ದಳು.
ಕೋರ್ಟ್ ವಾರಂಟ್ ಮಾತ್ರವಲ್ಲದೆ, 22 ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೆ. ಶೈಲಜಾ ಅವರು ಸಂಯೋಗಿತಾ ಪ್ರಕರಣದ ವಿಚಾರಣೆ ನಡೆಸಿ ನಾರಾಯಣ ರೆಡ್ಡಿಯ ತಾಯಿ ತಾರಾ ರೆಡ್ಡಿ ಮತ್ತು ಸಂಯೋಗಿತಾ ಮಾವ, ಮಾಜಿ ಪೊಲೀಸ್ ಅಧೀಕ್ಷಕ ಇಂದ್ರ ಕಿರಣ್ ರೆಡ್ಡಿಗೂ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ತಾರಾ ರೆಡ್ಡಿ ತನ್ನ ಮಗನ ಜೊತೆಗೆ ಅಮೆರಿಕಾದಲ್ಲಿದ್ದರೆ, ಇಂದ್ರ ಕಿರಣ್ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.
ಅಮೆರಿಕಾದಿಂದ ಬಂದು ತನ್ನ ಮಗಳ ಪ್ರಾಣ ಉಳಿಸಿದಲ್ಲಿ ಹಿಂದೆ ಆದದ್ದೆಲ್ಲವನ್ನು ಮರೆತು ಕೇಸು ವಾಪಸ್ಸು ತೆಗೆದುಕೊಳ್ಳುವುದಾಗಿ ಸಂಯೋಗಿತಾ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ
‘ನನ್ನ ಗಂಡನ ಅಮೆರಿಕದಿಂದ ಗಡೀಪಾರು ಮಾಡಿ’
ಮುಖಪುಟ / ವಾರ್ತೆಗಳು












Click it and Unblock the Notifications