ವೃತ್ತಿಪರ ಸೀಟು ಹಂಚಿಕೆ : ಸುಪ್ರಿಂಕೋರ್ಟ್‌ನಿಂದ ನೀತಿ ಸಂಹಿತೆ
ವೃತ್ತಿಪರ ಸೀಟು ಹಂಚಿಕೆ : ಸುಪ್ರಿಂಕೋರ್ಟ್‌ನಿಂದ ನೀತಿ ಸಂಹಿತೆ
ಕ್ಯಾಪಿಟೇಶನ್ ಶುಲ್ಕ ರದ್ದು , ವೃತ್ತಿಪರ ಸೀಟು ಸಮಪಾಲು
ಮುಖ್ಯ ನ್ಯಾಯಮೂರ್ತಿ ವಿ.ಎನ್.ಖಾರೆ ನೇತೃತ್ವದ ಐವರು ಮುಖ್ಯ ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ (ಆ. 14) ಈ ಆದೇಶ ಕೊಟ್ಟಿತು. ಇದರಂತೆ 2003- 04ನೇ ಶೈಕ್ಷಣಿಕ ವರ್ಷದಿಂದಲೇ ಈ ಸೀಟು ಹಂಚಿಕೆ ನೀತಿ ಜಾರಿಗೆ ಬರಲಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿಯಾಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯಾಂದನ್ನು ರಚಿಸಬೇಕು. ಈ ಸಮಿತಿ ಸೀಟು ಹಂಚಿಕೆಯ ಸಮರ್ಪಕತೆ ಮತ್ತು ಶುಲ್ಕ ವಸೂಲಿ ಬಗ್ಗೆ ನಿಗಾ ಹರಿಸಬೇಕು ಎಂದು ಸುಪ್ರಿಂಕೋರ್ಟ್ ಆದೇಶಿಸಿತು.
ಕ್ಯಾಪಿಟೇಶನ್ ಶುಲ್ಕ ವಸೂಲು ಮಾಡಕೂಡದು
ಯಾವುದೇ ವೃತ್ತಿಪರ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳಿಂದ ಕ್ಯಾಪಿಟೇಶನ್ ಶುಲ್ಕ ವಸೂಲು ಮಾಡಕೂಡದು. ಈ ಆದೇಶ ಧಿಕ್ಕರಿಸಿ ಯಾವುದಾದರೂ ಶಿಕ್ಷಣ ಸಂಸ್ಥೆ ಕಾಸು ಮಾಡುವುದು ಗಮನಕ್ಕೆ ಬಂದರೆ, ಅಂಥಾ ಸಂಸ್ಥೆಗಳ ಮಾನ್ಯತೆ ಮತ್ತು ಅನುದಾನ ರದ್ದು ಪಡಿಸಲು ಆಯಾ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದೂ ಅಪೆಕ್ಸ್ ಕೋರ್ಟ್ ಸೂಚಿಸಿತು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೇಬು ಹಗುರಾಗಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications