Get Updates
Get notified of breaking news, exclusive insights, and must-see stories!

ಹೊರಗೆ ಕನ್ನಡ ಸಿನಿಮಾ ಬೋರ್ಡು, ಒಳಗೆ ಇಂಗ್ಲಿಷ್‌ ನೋಡು

ಹೊರಗೆ ಕನ್ನಡ ಸಿನಿಮಾ ಬೋರ್ಡು, ಒಳಗೆ ಇಂಗ್ಲಿಷ್‌ ನೋಡು
ತೆರಿಗೆ ಕದಿಯುವ ಈ ತಂತ್ರ ತಡವಾಗಿಯಾದರೂ ಕೃಷ್ಣ ಗಮನಕ್ಕೆ ಬಂದಿದೆ

ಬೆಂಗಳೂರು : ಸರ್ಕಾರಕ್ಕೆ ತೆರಿಗೆ ನಾಮ ಇಕ್ಕಲು ಬೆಂಗಳೂರು ಮಹಾನಗರಿಯ ಅನೇಕ ಚಿತ್ರಮಂದಿರಗಳು ಮಾಡುತ್ತಿರುವ ತಂತ್ರವೇನು ಗೊತ್ತೆ? ಹೊರಗೆ ಕನ್ನಡ ಚಿತ್ರದ ಬೋರ್ಡು ನೇತುಹಾಕುವುದು. ಒಳಗೆ ಪರಭಾಷಾ ಚಿತ್ರಗಳನ್ನು ತೋರಿಸುವುದು.

ಮಂಗಳವಾರ (ಆ.5) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಈ ಸತ್ಯವನ್ನು ಹೇಳಿದರು. ಬಿಜೆಪಿಯ ಬಿ.ಸುರೇಶ್‌ ಕುಮಾರ್‌ ಅವರ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಿದ್ದರು. ಚಿತ್ರಮಂದಿರದ ಮಾಲೀಕರ ಈ ತಂತ್ರದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಲುಕ್ಸಾನಾಗುತ್ತಿದೆ. ಇನ್ನು ಮುಂದೆ ಹಾಗಾಗದಂತೆ ‘ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ- 1964’ಗೆ ತಿದ್ದುಪಡಿ ತರಲಾಗುವುದು. ತೆರಿಗೆ ಕದಿಯುವ ಚಿತ್ರಮಂದಿರದ ಮಾಲೀಕರಿಗೆ ದಂಡದ ಜೊತೆಗೆ ಹೆಚ್ಚು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿನಿಮಾ ಶೌಚಾಲಯಗಳು ಗಬ್ಬು ನಾರುತ್ತವೆ : ಜನರಿಂದ ದುಡ್ಡು ವಸೂಲು ಮಾಡುವ ಚಿತ್ರಮಂದಿರಗಳು ಶೌಚಾಲಯಗಳನ್ನು ಶುಚಿಯಾಗಿಡೋದಿಲ್ಲ. ಹೊಲಸಾಗಿರುತ್ತವೆ. ಸಿನಿಮಾ ಮಂದಿರಗಳು, ಕಲ್ಯಾಣ ಮಂಟಪಗಳು ಮತ್ತಿತರ ಸಾರ್ವಜನಿಕ ಶೌಚಾಲಯಗಳು ಶುಚಿಯಾಗಿರುವಂತೆ ನೋಡುಕೊಳ್ಳುವ ಜರೂರತ್ತಿದೆ ಎಂದು ಕೃಷ್ಣ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+