ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾದಯೋಗಿ ಸೆಮ್ಮಣ್ಗುಡಿಗೆ ಕನಕಾಭಿಷೇಕ

By Staff
|
Google Oneindia Kannada News

ನಾದಯೋಗಿ ಸೆಮ್ಮಣ್ಗುಡಿಗೆ ಕನಕಾಭಿಷೇಕ
ಸೆಮ್ಮಣ್ಗುಡಿ ಶ್ರೀನಿವಾಸ ಅಯ್ಯರ್‌ ಅವರಿಗೆ 96 ತುಂಬಿದ ಸಮಾರಂಭದಲ್ಲಿ ಇಳಯರಾಜ ಕಣ್ಣಲ್ಲಿ ನೀರಾಡಿತು

ಚೆನ್ನೈ : ಒಬ್ಬ ಸಂಗೀತಗಾರನಾಗಿ ಇಂಥಾ ನಾದಯೋಗಿ ನನಗೆ ಗೊತ್ತಿದ್ದರು ಅಂತ ಹೇಳುವುದೇ ನನಗೆ ಸಂದಿರುವ ದೊಡ್ಡ ಗೌರವ- ಇಳಯರಾಜ.

ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಸೆಮ್ಮಣ್ಗುಡಿ ಆರ್‌. ಶ್ರೀನಿವಾಸ ಅಯ್ಯರ್‌ ಅವರಿಗೆ 96 ತುಂಬಿದ ಸಮಾರಂಭ ಅಕ್ಷರಶಃ ಸ್ವರ್ಣಮಯವಾಗಿತ್ತು. ಸಿನಿಮಾ ಸಂಗೀತದಲ್ಲಿ ಹೆಸರು ಮಾಡಿರುವ ಮಟ್ಟುಗಾರ ಇಳಯರಾಜ ಭಾನುವಾರ (ಜು.27) 96 ಚಿನ್ನದ ನಾಣ್ಯಗಳಿಂದ ಸೆಮ್ಮಣ್ಗುಡಿಯವರಿಗೆ ಅಭಿಷೇಕ ಮಾಡಿದರು. ಒಂದೊಂದು ನಾಣ್ಯವೂ ಅವರ ಜೀವಮಾನದ ಒಂದೊಂದು ವರ್ಷದ ಪ್ರತಿನಿಧಿ ಎಂದು ಇಳಯರಾಜ ಹೇಳಿದರು.

Semmangudi R Srinivasa Iyerನಾದಯೋಗಿ ಅಂತಲೇ ಹೆಸರುವಾಸಿಯಾಗಿರುವ ಸೆಮ್ಮಣ್ಗುಡಿ ತಂಜಾವೂರಿನ ಪ್ರತಿಭೆ. ತಮ್ಮ ಬಂಧು ತಿರುಕ್ಕೋಡಿಕಾವಲ್‌ ಕೃಷ್ಣ ಅಯ್ಯರ್‌ ಅವರಿಂದ ಮೊದಲು ಸಂಗೀತ ಪಾಠ ಕಲಿತ ಇವರು ನಂತರ ತಿರುವಿಡೈಮರುದುರ್‌ ಸಖರಾಮ ರಾವ್‌ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್‌ ಬಳಿ ಕಲಿಕೆ ಮುಂದುವರೆಸಿದರು.

ಸಂಗೀತ ಅಕಾಡೆಮಿ ಕೊಡುವ ಸಂಗೀತ ಕಲಾನಿಧಿ ಪ್ರಶಸ್ತಿಗೆ 1947ರಲ್ಲಿ ಭಾಜನರಾದ ಅತಿ ಕಿರಿಯ ವಯಸ್ಸಿನ ಪ್ರತಿಭೆ ಸೆಮ್ಮಣ್ಗುಡಿ. ಸಂಗೀತಗಾರರು, ಸಹೃದಯರು ಕಿಕ್ಕಿರಿದಿದ್ದ ಹುಟ್ಟುಹಬ್ಬ ಸಮಾರಂಭದಲ್ಲಿ ಸೆಮ್ಮಣ್ಗುಡಿಯವರಿಗೆ 1500 ದೇವಸ್ಥಾನಗಳಿಂದ ತಂದ ಪ್ರಸಾದವನ್ನು ನೀಡಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X