ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಭಯ: ವಿದೇಶಿ ಪ್ರವಾಸಿ-ಗಣ್ಯರಿಗೆ ನೀತಿಸಂಹಿತೆ ಜಾರಿ

By Staff
|
Google Oneindia Kannada News

ವೀರಪ್ಪನ್‌ ಭಯ: ವಿದೇಶಿ ಪ್ರವಾಸಿ-ಗಣ್ಯರಿಗೆ ನೀತಿಸಂಹಿತೆ ಜಾರಿ
ಅರಣ್ಯ ಪ್ರದೇಶಗಳ ಅತಿಥಿ ಗೃಹ- ಜಂಗಲ್‌ ಲಾಡ್ಜ್‌ಗಳಿಗೆ ಪ್ರವೇಶ ನಿರ್ಬಂಧ

ಮೈಸೂರು : ಭೀಮನ ಅಮಾವಾಸ್ಯೆ ಹತ್ತಿರವಾಗುತ್ತಿರುವಂತೆಯೇ ನರಹಂತಕ ವೀರಪ್ಪನ್‌ ಮತ್ತೆ ನೆನಪಾಗುತ್ತಿದ್ದಾನೆ. ಪೊಲೀಸರ ಪಾಲಿಗಂತೂ ವೀರಪ್ಪನ್‌ ಆತಂಕ ನೆರಳಾಗಿ ಕಾಡುತ್ತಿದೆ. ಆ ಕಾರಣದಿಂದಲೇ ಮೈಸೂರು ಜಿಲ್ಲೆಯ ಕೆಲವು ಅರಣ್ಯ ಪ್ರದೇಶಗಳಲ್ಲೀಗ ಗಣ್ಯರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಪ್ರವೇಶ ನಿಷಿದ್ಧ .

ಮೈಸೂರು ಜಿಲ್ಲೆಯ ಸುಂಕದಕಟ್ಟೆಯಲ್ಲಿನ ಅರಣ್ಯ ಪ್ರದೇಶದ ಅತಿಥಿ ಗೃಹಗಳು ಹಾಗೂ ಅರಣ್ಯಕ್ಕೆ ಹೊಂದಿಕೊಂಡ ಇತರ ಪ್ರದೇಶಗಳ ಜಂಗಲ್‌ ಲಾಡ್ಜ್‌ಗಳಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಗಣ್ಯ ವ್ಯಕ್ತಿಗಳಿಗೆ ಆಗಸ್ಟ್‌ 17ರವರೆಗೆ ನಿರ್ಬಂಧ ಹೇರಲಾಗಿದೆ. ಒಂದುವೇಳೆ ಈ ಪ್ರದೇಶಗಳಿಗೆ ಭೇಟಿ ಕೊಡುವುದು ಅನಿವಾರ್ಯವಾದರೆ, ಎಸ್‌ಟಿಎಫ್‌ ಪೊಲೀಸರ ಪೂರ್ವಾನುಮತಿ ಪಡೆಯುವುದು ಅಗತ್ಯ.

ಮೈಸೂರಿನ ಪೊಲೀಸ್‌ ಅಧೀಕ್ಷಕರು ಡೆಪ್ಯೂಟಿ ಕಮೀಷನರ್‌ ಜಿ.ಕುಮಾರ್‌ ನಾಯಕ್‌ ಅವರಿಗೆ ಪತ್ರ ಬರೆದಿದ್ದು , ಈ ಪತ್ರದ ಪ್ರಕಾರ- ಎಸ್‌ಟಿಎಫ್‌ನಿಂದ ಬಂದ ಮಾಹಿತಿ ಮೇರೆಗೆ ವೀರಪ್ಪನ್‌ ಮತ್ತೆ ತನ್ನ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ. ಆ ಕಾರಣದಿಂದ ಆಗಸ್ಟ್‌ 17ರವರೆಗೆ ವಿದೇಶಿ ಪ್ರವಾಸಿಗರಿಗೆ ಹಾಗೂ ಅತಿ ಗಣ್ಯರಿಗೆ ಅರಣ್ಯ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸುವುದು ಅನಿವಾರ್ಯ. ಪೊಲೀಸ್‌ ಅಧೀಕ್ಷಕರ ಪತ್ರದ ಹಿನ್ನೆಲೆಯಲ್ಲಿ ಜುಲೈ 17ರಿಂದ ಅನ್ವಯವಾಗುವಂತೆ ಆಯ್ದ ಪ್ರದೇಶಗಳಲ್ಲಿ 1 ತಿಂಗಳ ಕಾಲ ವಿದೇಶಿ ಪ್ರವಾಸಿಗರು ಹಾಗೂ ಅತಿ ಗಣ್ಯ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಿ ಡೆಪ್ಯುಟಿ ಕಮೀಷನರ್‌ ಆದೇಶ ಹೊರಡಿಸಿದ್ದಾರೆ.

ಬಂಡೀಪುರ ಅರಣ್ಯ ಪ್ರದೇಶ ಕೂಡ ವೀರಪ್ಪನ್‌ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ಪೊಲೀಸರು ಶಂಕಿಸಿದ್ದು , ಈ ಪ್ರದೇಶದಲ್ಲಿ ಪ್ರತಿಯಾಬ್ಬರಿಗೂ ರಕ್ಷಣೆ ನೀಡುವುದು ಅಸಾಧ್ಯ ಎಂದು ಮೈಸೂರಿನ ಪೊಲೀಸ್‌ ಅಧೀಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X