ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಪೇಜಾವರ ಶ್ರೀಗಳ ಎರಡು ಸೂತ್ರ

By Staff
|
Google Oneindia Kannada News

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಪೇಜಾವರ ಶ್ರೀಗಳ ಎರಡು ಸೂತ್ರ
ಮಂದಿರ ಕಟ್ಟುವ ವಿಷಯದಲ್ಲಿ ಶ್ರೀಗಳ ಸಂಕಲ್ಪ ಅಚಲ

ಮೈಸೂರು : ಕಂಚಿ ಶ್ರೀಗಳ ನಂತರ ಈಗ ಪೇಜಾವರ ಶ್ರೀಗಳ ಸರದಿ. ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಲು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಎರಡು ಹೊಸ ಸೂತ್ರಗಳನ್ನು ಹೊಸೆದಿದ್ದಾರೆ.

ಕಂಚಿಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಮುಸ್ಲಿಂ ಧರ್ಮ ಸಂಹಿತ್‌ ಜೊತೆ ನಡೆಸಿರುವ ಮಾತುಕತೆ ಫಲ ಕೊಡಲಿಲ್ಲವಾದರೂ, ಅದರಿಂದ ಮಂದಿರ ನಿರ್ಮಾಣದ ಸಂಕಲ್ಪವೇನೂ ಭಂಗವಾಗಿಲ್ಲ. ಉತ್ತರ ಭಾರತದ ಎಲ್ಲಾ ಹಿಂದೂ ಧಾರ್ಮಿಕ ಮುಖಂಡರು ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಕರ್ನಾಟಕದಲ್ಲೂ ಒಂದಿಬ್ಬರು ಸ್ವಾಮೀಜಿಗಳನ್ನು ಹೊರತು ಪಡಿಸಿ ಎಲ್ಲರೂ ಮಂದಿರ ನಿರ್ಮಾಣಕ್ಕೆ ಸಹಮತ ಸೂಚಿಸಿದ್ದಾರೆ. ಏನೇ ಆಗಲಿ, ಮಂದಿರ ಕಟ್ಟುವುದಂತೂ ಖಚಿತ ಎನ್ನುವುದು ವಿಶ್ವೇಶತೀರ್ಥರ ಹೇಳಿಕೆ.

ನ್ಯಾಯಾಲಯದಲ್ಲಿ ಅಯೋಧ್ಯೆ ದೇವಳ ನಿರ್ಮಾಣದ ಸಮಸ್ಯೆ ಬಗೆಹರಿಯುವುದು ಸಾಧ್ಯವಿಲ್ಲ. ಒಂದು ವೇಳೆ ನ್ಯಾಯಾಲಯ ತೀರ್ಪಿತ್ತರೂ ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆಂಬ ನಂಬಿಕೆಯಿಲ್ಲ. ಧಾರ್ಮಿಕ ಮುಖಂಡರೆಲ್ಲ ನಿರ್ಮಲ ಮನಸ್ಸಿನಿಂದ ಕೂತು ಚರ್ಚಿಸಿ, ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅಲ್ಲದೆ, ಜನತೆಯ ಆಶಯಕ್ಕೂ ಮನ್ನಣೆ ಸಿಗಬೇಕು. ಹಲವು ಧಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ, ಎರಡು ಸೂತ್ರಗಳನ್ನು ರಚಿಸಿದ್ದೇವೆ. ಚಾತುರ್ಮಾಸ್ಯ ಮುಗಿದ ನಂತರ ಮುಸ್ಲಿಂ ಮುಖಂಡರಿಗೆ ಆ ಸೂತ್ರಗಳನ್ನು ತಿಳಿಸುತ್ತೇವೆ. ಆಮೇಲೆ ಸೂತ್ರಗಳನ್ನು ಬಹಿರಂಗಪಡಿಸುತ್ತೇವೆ ಎಂದು ಪೇಜಾವರ ಶ್ರೀಗಳು ಹೇಳುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X