ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಂಥ ದರಿದ್ರ ಬೆಂಗಳೂರು ರೀ- ವಾರ್ಟನ್‌ ಸ್ಕೂಲ್‌ ಮೇಷ್ಟ್ರು

By Staff
|
Google Oneindia Kannada News

ಇದೆಂಥ ದರಿದ್ರ ಬೆಂಗಳೂರು ರೀ- ವಾರ್ಟನ್‌ ಸ್ಕೂಲ್‌ ಮೇಷ್ಟ್ರು
ಎರಿಕ್‌ ಕೆ. ಕ್ಲೆಮನ್ಸ್‌ಗೂ ಬೆಂಗಳೂರಿನ ಮೂಲಭೂತ ಸೌಕರ್ಯದ ಬಗ್ಗೆ ಬೇಸರ

ಬೆಂಗಳೂರು : ಇನ್‌ಫ್ರಾಸ್ಟ್ರಕ್ಚರಿನ ಬಗ್ಗೆ ಇನ್ಫೋಸಿಸ್‌ ನಾರಾಯಣ ಮೂರ್ತಿ ಮತ್ತು ‘ವಿಪ್ರೋ’ತ್ತಮ ಅಜೀಂ ಪ್ರೇಂಜಿ ಅಸಮಾಧಾನ ವ್ಯಕ್ತಪಡಿಸಿದ್ದು ಅನೇಕರಿಗೀಗ ಸ್ಫೂರ್ತಿಯಾಗಿದೆ. ಅಮೆರಿಕಾದ ವಾರ್ಟನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನ ಪ್ರೊಫೆಸರ್‌ ಎರಿಕ್‌ ಕೆ. ಕ್ಲೆಮನ್ಸ್‌ ಕರ್ನಾಟಕವಷ್ಟೇ ಅಲ್ಲ ಆಂಧ್ರಪ್ರದೇಶದ ಮೂಲಭೂತ ಸೌಕರ್ಯದ ಬಗೆಗೂ ಬೇಸರ ವ್ಯಕ್ತಪಡಿಸಿದ್ದಾರೆ.

ವ್ಯಾಪಾರದ ಎರವಲು ಸೇವೆಯ ಬಗ್ಗೆ ಪುಸ್ತಕ ಬರೆಯುತ್ತಿರುವ ಕ್ಲೆಮನ್ಸ್‌ ಬೆಂಗಳೂರು ಪ್ರವಾಸದಲ್ಲಿದ್ದಾರೆ. ಅವರು ಹೇಳುತ್ತಾರೆ-

  • ಭಾರತದ ಎಂಜಿನಿಯರುಗಳನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ಇಲ್ಲಿ ಪ್ರತಿಭೆ ಇದೆ. ಅದಕ್ಕೆ ತಕ್ಕಂಥ ಮೂಲಭೂತ ಸೌಕರ್ಯ ಇಲ್ಲ.
  • ಭಾರತೀಯರ ವ್ಯಾಪಾರಕ್ಕೆ ನ್ಯೂಜೆರ್ಸಿ ಮಸೂದೆಯಿಂದ ಏನೇನೂ ತೊಂದರೆಯಾಗುತ್ತಿಲ್ಲ. ಇಲ್ಲಿನ ವಿಳಂಬ ನೀತಿಗಳೇ ತೊಂದರೆಗೆ ಮುಖ್ಯ ಕಾರಣ.
  • Immediate ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲ. ಈಗಲೇ ಇಂತಾ ಕೆಲಸ ಆಗಬೇಕು ಅಂದರೆ, ಒಂದು ವಾರ ಅಂತ ರ್ಥ ಮಾಡ್ಕೋತಾರೆ.
  • ಭಾರತದ ವಿಮಾನ ನಿಲ್ದಾಣಗಳನ್ನು ನೋಡಿದರೆ ನನಗೆ ಕಾಫ್ಕನ ಕಾದಂಬರಿಗಳು ನೆನಪಾಗುತ್ತವೆ.
  • ಜುಲೈ 22ನೇ ತಾರೀಕು ಸಾಯಂಕಾಲ 5 ಗಂಟೆಯಿಂದ 5.35ರ ಸಮಯದಲ್ಲಿ 10 ಸಲ ಕರೆಂಟ್‌ ಹೋಗಿದೆ. ಇಂಥಾ ಊರಲ್ಲಿ ಹೈ ಪವರ್‌ ಎಂಜಿನಿಯರಿಂಗ್‌ ಉಪಕರಣಗಳನ್ನು ತಯಾರು ಮಾಡೋಕೆ ಹೇಗೆ ಸಾಧ್ಯ?
  • ಇಲ್ಲಿ ಫೈವ್‌ ಸ್ಟಾರ್‌ ಹೊಟೇಲ್‌ಗಳಲ್ಲಿ 2 ಸ್ಟಾರ್‌ ಹೊಟೇಲುಗಳಲ್ಲಿ ಕೆಲಸ ಮಾಡಲೂ ಲಾಯಕ್ಕಿಲ್ಲದ ಸಿಬ್ಬಂದಿ ಇರುತ್ತಾರೆ.
ಬರೀ ನಗರದ ಕರೆಂಟು ಕಟ್‌ ನೋಡಿಯೇ ಕ್ಲೆಮನ್ಸ್‌ ಇಷ್ಟು ಬೇಜಾರಾಗಿದ್ದಾರೆ. ಇನ್ನು ದಿನಗಟ್ಟಲೆ ಕರೆಂಟಿಲ್ಲದೆ ಏಗುತ್ತಿರುವ ಹಳ್ಳಿಗರು ಏನನ್ನಬೇಕು? ಒಂದೊಮ್ಮೆ ಕ್ಲೆಮನ್ಸ್‌ ಹಳ್ಳಿಗಳನ್ನೂ ಸುತ್ತಿ ಬರಲಿ. ಆಗ ಅವರ ದೂರುಗಳ ಪಟ್ಟಿ ಇನ್ನಷ್ಟು ಬೆಳೆಯುವುದರ ಜೊತೆಗೆ, ಹೊಸ ಸ್ವರೂಪವನ್ನೂ ಪಡೆದುಕೊಳ್ಳುವುದರಲ್ಲಿ ಅಚ್ಚರಿಯಿಲ್ಲ. ಏನಂತೀರಿ?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X