• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಯಾಬಿಟಿಕ್‌ ರೆಟಿನೋಪತಿ ಅಂದರೆ ಗೊತ್ತೆ ?

By Staff
|

ಡಯಾಬಿಟಿಕ್‌ ರೆಟಿನೋಪತಿ ಅಂದರೆ ಗೊತ್ತೆ ?

ಡಯಾಬಿಟಿಸ್‌ ಮತ್ತು ಕಣ್ಣಿನ ಖಾಯಿಲೆಗಳು ಎಂಬ ವಿಚಾರವಾಗಿ ಸಾರ್ವಜನಿಕ ಕಾರ್ಯಕ್ರಮ

ಸ್ಥಳ: ಮಹಾರಾಜ ಕಾಲೇಜಿನ ಶತಮಾನೋತ್ಸವ (ಸೆಂಟೆನರಿ ಹಾಲ್‌) ಭವನ

ದಿನಾಂಕ : 27-07-03 (ಭಾನುವಾರ)

ಸಮಯ : ಬೆಳಿಗ್ಗೆ 10.00 ಘಂಟೆಯಿಂದ.

ಡಯಾಬಿಟಿಸ್‌ನಿಂದ ಬರುವ ಡಯಾಬಿಟಿಕ್‌ ರೆಟಿನೋಪತಿ ಎಂಬ ಮಾರಕ ರೋಗದ ವಿರುದ್ಧ ಜನಸಾಮಾನ್ಯರಿಗೆ ಅಮೆರಿಕಾ ಮತ್ತು ಭಾರತದ ಹೆಸರಾಂತ ತಜ್ಞವೈದ್ಯರುಗಳಿಂದ ಅರಿವು ಮೂಡಿಸುವ ಕಾರ್ಯಕ್ರಮ.

ಡಯಾಬಿಟಿಕ್‌ ರೆಟಿನೋಪತಿ ಎಂಬ ಅಪಾಯಕಾರಿ ಕಣ್ಣಿನ ಖಾಯಿಲೆಯು ಪ್ರತಿ ಹತ್ತು ಡಯಬಿಟಿಸ್‌ ರೋಗಿಗಳಲ್ಲಿ ಒಂಭತ್ತು ಜನರನ್ನು ಕಾಡುವ ಸಾಧ್ಯತೆಗಳಿವೆ. ಈ ಖಾಯಿಲೆಯನ್ನು ಆರಂಭದಲ್ಲಿ ಪತ್ತೆ ಮಾಡದೆ ತಡವಾಗಿ ಚಿಕಿತ್ಸೆ ಮಾಡುವುದರಿಂದ ಯಾವ ಪ್ರಯೋಜನವೂ ಆಗದು. ಶಾಶ್ವತವಾಗಿ ದೃಷ್ಟಿಯನ್ನು ಕಳೆದು ಕೊಳ್ಳುವ ಸಂಭವಗಳಿವೆ. ಭಾರತದಲ್ಲಿ ಕುರುಡುತನಕ್ಕೆ ಕಾರಣವಾಗಿರುವ ಮೊದಲ ಆರು ಪ್ರಮುಖ ಕಾರಣಗಳಲ್ಲಿ ಈ ಖಾಯಿಲೆ ಸಹ ಒಂದು. ಇಂತಹ ಒಂದು ಭೀಕರ ಕಾಯಿಲೆಯಿಂದ ಕಣ್ಣನ್ನು ರಕ್ಷಿಸಿಕೊಳ್ಳಲು ಮಾರ್ಗೋಪಾಯಗಳನ್ನು ತೋರಿಸುವಂತಹ ಪ್ರಯತ್ನವೇ ಈ ಸಮಾರಂಭದ ಉದ್ದೇಶ.

Know about Diabetic Retinopathyಮೈಸೂರಿನ ಉಷಾ ಕಿರಣ್‌ ಕಣ್ಣಿನ ಆಸ್ಪತ್ರೆಯ ಹೆಸರಾಂತ ನೇತ್ರ ತಜ್ಞ ಡಾ। ಕೆ.ವಿ.ರವಿಶಂಕರ್‌ ಮತ್ತು ಅಮೆರಿಕಾದಲ್ಲಿ ಜನಪ್ರಿಯವಾದ ‘ಅಮೆರಿಕನ್ನಡ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಎಸ್‌.ಕೆ.ಹರಿಹರೇಶ್ವರ ಇವರ ನೇತೃತ್ವದಲ್ಲಿ ಈ ಸಮಾರಂಭವು ಜರುಗಲಿದೆ. ಅಂದು ಅಮೆರಿಕಾ ಮತ್ತು ಭಾರತದ ಹೆಸರಾಂತ ನೇತ್ರ ತಜ್ಞರನ್ನು ಒಟ್ಟುಗೂಡಿಸಿ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿಯನ್ನು ದೊರಕಿಸಿಕೊಡುವುದು ಇವರ ಪ್ರಮುಖ ಉದ್ದೇಶ. ಈ ಸಮಾರಂಭಕ್ಕೆ ನಾನಾ ಸಂಘಟನೆಯ ನೇತಾರರು ಆಗಮಿಸಿ ತನ್ಮೂಲಕ ಸಮಾರಂಭದ ಸಂದೇಶವನ್ನು ತಮ್ಮವರಿಗೆಲ್ಲಾ ತಲುಪಿಸಬೇಕೆಂಬುದು ಇವರ ಅಪೇಕ್ಷೆ.

ಡಯಾಬಿಟಿಸ್‌ ಪ್ರಮಾಣ

ಭಾರತದಲ್ಲಿಯೇ ಅಂದಾಜು 40 ರಿಂದ 60 ಮಿಲಿಯನ್‌ ಡಯಬಿಟಿಸ್‌ ರೋಗಿಗಳಿದ್ದಾರೆ. ಇವರಲ್ಲಿ 10 ಮಿಲಿಯನ್‌ ಜನರು ಕುರುಡುತನ ಇಲ್ಲವೆ ಕಣ್ಣಿನ ಖಾಯಿಲೆಯುಳ್ಳವರಾಗಿದ್ದಾರೆ. ಮೈಸೂರಿನಲ್ಲಿ ಸಹಸ್ರಾರು ಜನರು ಡಯಾಬಿಟಿಸ್‌ ಕಣ್ಣಿನ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ಕರ್ನಾಟಕದಲ್ಲಿ ಈ ಸಂಖ್ಯೆ ಕೆಲವು ಲಕ್ಷಗಳನ್ನೇ ದಾಟಿವೆ.

ಡಯಾಬಿಟಿಸ್‌ನಿಂದ ಕುರುಡುತನ ಹೆಚ್ಚಾಗದಂತೆ ನಿಯಂತ್ರಿಸುವ ದಿಸೆಯಲ್ಲಿನ ಕಾರ್ಯಕ್ರಮ

ಅಮೆರಿಕಾ ದೇಶದ ಟೆಕ್ಸಾಸ್‌ನಲ್ಲಿನ ಬೇಯ್ಲರ್‌ ಸ್ಕೂಲ್‌ ಆಫ್‌ ಮೆಡಿಸಿನ್‌,ಹ್ಯೂಸ್ಟನ್‌ ಮತ್ತು ಯಾಲೆ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ ನ್ಯೂಹೆವೆನ್‌, ಅಮೆರಿಕಾ - ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಖ್ಯಾತ ವಿಟ್ರಿಯೋ ರೆಟಿನಲ್‌ ಸರ್ಜನ್‌ರಾಗಿರುವ ಡಾ। ರಂಗು ಚಂದ್ರನ್‌ರವರು 2 ವಾರಗಳ ಭಾರತ ಪ್ರವಾಸ ಕೈಗೊಂಡಿದ್ದು ಅಂದಿನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಾಡಲಿರುವರು. ಆಲ್ಲದೆ ಅವರು ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಉಷಾ ಕಿರಣ್‌ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಎಲ್ಲಾ ತರಹದ ರೋಗಗಳಿಗೂ 26-07-03 ರ ವರೆಗೆ ಚಿಕೆತ್ಸೆ/ಶಸ್ತ್ರಚಿಕಿತ್ಸೆಗಳಿಗೆ ಲಭ್ಯರಿರುವರು. ಸಮಾರಂಭದಲ್ಲಿ ಡಯಾಬಿಟಿಕ್‌ ರೆಟಿನೋಪತಿ ಖಾಯಿಲೆಯು ಹೇಗೆ ಕಣ್ಣಿನ ಸೂಕ್ಷ್ಮ ನಾಳಗಳನ್ನು ಛಿದ್ರಗೊಳಿಸಿ ರಕ್ತಸ್ರಾವವನ್ನುಂಟುಮಾಡಿ ಕುರುಡುತನಕ್ಕೆ ಕಾರಣವಾಗುತ್ತದೆ, ಈ ರೋಗದ ಲಕ್ಷಣಗಳೇನು, ಯಾವ ಚಿಕಿತ್ಸಾ ವಿಧಾನಗಳಿಂದ ಈ ಖಾಯಿಲೆಯನ್ನು ನಿಯಂತ್ರಿಸಬಹದು ಎಂಬ ವಿಚಾರವಾಗಿ ವಿವರವಾಗಿ ಮನವರಿಕೆ ಮಾಡಿಕೊಡುವರು.

-2-

‘ಭಾರತದಲ್ಲಿ ಬಹುತೇಕ ಜನರು ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದೆ ತಮ್ಮ ದೃಷ್ಟಿಯ ಮೇಲೆಯೇ ದರೋಡೆ ನಡೆಸುತ್ತಿದ್ದಾರೆ. ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸುತ್ತಾ ವರ್ಷಕ್ಕೊಮ್ಮೆಯಂತೆ ನೇತ್ರ ತಜ್ಞರಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕಣ್ಣನ್ನು ಕಾಪಾಡಿಕೊಳ್ಳಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡ ಆರಂಭದಲ್ಲೆಯೇ ಸೂಕ್ತ ಚಿಕೆತ್ಸೆ ಪಡೆಯದೆ ಅಲಕ್ಷಿಸಿದರೆ ಖಾಯಿಲೆಯ ತೀವ್ರತೆ ಹೆಚ್ಚುವುದಲ್ಲದೆ ಶಾಶ್ವತವಾಗಿ ಕುರುಡುತನ ತಂದುಕೊಳ್ಳಬೇಕಾಗುತ್ತದೆ. ತಡಮಾಡಿದಷ್ಟೂ ಸಹ ಚಿಕಿತ್ಸೆಯ ವಿಧಾನಗಳೂ ಸಹ ಕ್ಲಿಷ್ಟಕರವಾಗುತ್ತಾ ಹೋಗುತ್ತದೆ. ಸಕಾಲಿಕ ಮತ್ತು ಆರಂಭದಲ್ಲಿ ಚಿಕಿತ್ಸೆ ಪಡೆಯುವುದರಿಂದ ಶೇ 60 ರಿಂದ 70 ರವರೆಗೆ ಈ ಖಾಯಿಲೆಯಿಂದ ಸಂಪೂರ್ಣವಾಗಿ ಗುಣ ಮುಖರಾಗಬಹುದು.’ ಎಂದು ಡಾ। ರಂಗು ಚಂದ್ರನ್‌ ರವರು ಕಳಕಳಿ ವ್ಯಕ್ತಪಡಿಸುತ್ತಾರೆ.

ಅನೇಕ ವರ್ಷಗಳ ಕಾಲ ಮದ್ರಾಸಿನ ಶಂಕರ ನೇತ್ರಾಲಯದಲ್ಲಿ ಮತ್ತು ಬೆಲ್ಜಿಯಂನಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುವ ಡಾ। ಕೆ.ವಿ.ರವಿಶಂಕರ್‌ ರವರು ಯಾವ ವರ್ಗದ ಜನರಿಗೆ ಡಯಾಬಿಟಿಸ್‌ ಹೆಚ್ಚಾಗಿ ಬರುತ್ತದೆ ಮತ್ತು ಡಯಾಬಿಟಿಕ್‌ ರೆಟಿನೋಪತಿ ಎಂಬ ಖಾಯಿಲೆ ಹೇಗೆ ಉಲ್ಬಣಗೊಳ್ಳುತ್ತದೆ ಎಂದು ಸವಿಸ್ತಾರವಾಗಿ ಜನ ಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲಿರುವರು.

‘ಇವತ್ತಿನ ದಿನಗಳಲ್ಲಿ ಭಾರತದಲ್ಲಿ ಏಡ್ಸ್‌ ರೋಗಕ್ಕಿಂತಲೂ ಡಯಾಬಿಟಿಸ್‌ ರೋಗಕ್ಕೆ ಹೆಚ್ಚುಮಂದಿ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತವು ಜಗತ್ತಿನ ಡಯಾಬಿಟಿಸ್‌ ಖಾಯಿಲೆಗೆ ರಾಜಧಾನಿಯಾಗುವತ್ತ ಮುನ್ನುಗ್ಗುತ್ತಿರುವಂತೆ ತೋರುತ್ತಿದೆ. ರೋಗ ಪೀಡಿತರಲ್ಲಿ ಕೇವಲ 12 ರಿಂದ 14 ಪ್ರತಿಶತ ಮಾತ್ರ ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದು ದುರದೃಷ್ಟಕರ. ಡಯಾಬಿಟಿಕ್‌ ರೆಟಿನೋಪತಿ ವಿರುದ್ಧ ಜನರಲ್ಲಿ ಸೂಕ್ತ ಅರಿವು ಮೂಡಿಸುವಂತಹ ಕಾರ್ಯದಲ್ಲಿ ನಾವೂ ಸಹ ಕೈ ಜೋಡಿಸುತ್ತೇವೆ. ಈ ಸಾಧನೆಯನ್ನು ಮೊದಲು ಮೈಸೂರಿನಲ್ಲೂ ನಂತರ ಭಾರತದ ಇತರೆಡೆಗಳಲ್ಲೂ ಮಾಡಿ ತೋರಿಸಲು ನಾವು ಉತ್ಸುಕರಾಗಿದ್ದೇವೆ. ಈ 27 ರಂದು ಜರುಗುವ ಸಮಾರಂಭವು ಪರಿಸ್ಥಿತಿಯ ಗಂಭೀರತೆಯನ್ನು ಜನರ ಮನದಾಳಕ್ಕೆ ಮುಟ್ಟಿಸುವಂತಹ ಮಹತ್ತರ ಹೆಜ್ಜೆಯೆಂದು ನಾನು ಭಾವಿಸಿದ್ದೇನೆ’ ಎಂದು ಹೇಳುತ್ತಾರೆ, ಡಾ। ರವಿಶಂಕರ್‌.

ಮದ್ರಾಸಿನ ಶಂಕರ ನೇತ್ರಾಲಯ ಹಾಗೂ ಹೈದರಬಾದಿನ ಎಲ್‌. ವಿ. ಪ್ರಸಾದ್‌ ನೇತ್ರ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವಿ ನೇತ್ರ ತಜ್ಞೆ, ಡಾ। ಉಮಾ ರವಿಶಂಕರ್‌ ರವರು ಡಯಾಬಿಟಿಕ್‌ ರೋಗಿಗಳಲ್ಲಿ ಕಂಡುಬರುವಂತಹ ಇತರೆ ಸಾಮಾನ್ಯ ಕಣ್ಣಿನ ಖಾಯಿಲೆಗಳು ಮತ್ತು ದೃಷ್ಟಿಹೀನತೆಗೆ ಸರ್ವೇಸಾಮಾನ್ಯ ಕಾರಣಗಳು ಎನ್ನುವ ವಿಚಾರವಾಗಿ ವಿವರಿಸುವರು.

‘ಕರಟು ಪುರಾಣ ಅಥವಾ ದಂತ ಕಥೆಗಳಿಗೆ ಹೆದರಿ ಡಯಾಬಿಟಿಸ್‌ಗೆ ಚಿಕಿತ್ಸೆಮಾಡಿಸದಿರುವುದು ಮತ್ತು ಕಣ್ಣಿನ ಆರೈಕೆ ಮಾಡದೇ ಇರುವುದು ಮುಂತಾದ ಮೂಢನಂಬಿಕೆಗಳನ್ನು ತೊಡೆದುಹಾಕಲು ತಾ। 27ರಂದು ನಡೆಯುವಂತಹ ಶೈಕ್ಷಣಿಕ ಸಮಾವೇಶಗಳು ನಡೆಯುತ್ತಿರಬೇಕು. ಕಣ್ಣಿನ ಇತರೆ ಖಾಯಿಲೆಗಳಾದ ಗ್ಲಾಕೋಮ ಮತ್ತು ಕಣ್ಣಿನಪೊರೆ ಮುಂತಾದ ಖಾಯಿಲೆಗಳನ್ನು ಕುರಿತು ಅಂದಿನ ಸಮಾರಂಭದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗುವುದು.’ ಎನ್ನುತ್ತಾರೆ, ಡಾ। ಉಮಾ ರವಿಶಂಕರ್‌.

ಆಸ್ಟ್ರೇಲಿಯಾದಲ್ಲಿ ಪರಿಣಿತರಾದ ಡಯಾಬಿಟಿಸ್‌ ತಜ್ಞ ಡಾ। ಲಕ್ಷ್ಮೀನಾರಾಯಣ ಎಂ.ಡಿ. ಇವರು ಡಯಾಬಿಟಿಸ್‌ ಕಾರಣದಿಂದಾಗಿ ಬರುವ ಮೂತ್ರಪಿಂಡದ ಖಾಯಿಲೆ, ನರಗಳ ದುರ್ಬಲತೆ, ಚರ್ಮವ್ಯಾಧಿ, ಹಲ್ಲಿನ ಆನಾರೋಗ್ಯ ಹಾಗೂ ಹೃದಯದ ಮೇಲಾಗುವ ದುಷ್ಪರಿಣಾಮಗಳು ಮತ್ತು ಚಿಕಿತ್ಸೆಗೆ ಎದುರಾಗುವ ತೊಡಕುಗಳನ್ನು ಕುರಿತು ಮಾತನಾಡುವರು.

‘ಡಯಾಬಿಟಿಸ್‌ ಖಾಯಿಲೆಗೆ ನಮ್ಮ ಜೀವನ ಶೈಲಿಯೂ ಸಹ ಒಮ್ಮೊಮ್ಮೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸೂಕ್ತ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆರೋಗ್ಯಕ್ಕೆ ಹೊಂದುವಂತಹ ಸತ್ವಯುತ ಆಹಾರ, ನಿಯಮಿತ ವ್ಯಾಯಾಮ, ರಕ್ತದಲ್ಲಿನ ಗ್ಲೂಕೋಸ್‌ ಪ್ರಮಾಣ, ಕ್ರಮವಾದ ಔಷಧ ಸೇವನೆ, ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಇವೆಲ್ಲದರ ಬಗ್ಗೆ ಹೆಚ್ಚಿನ ಗಮನಹರಿಸುವುದು ಸುರಕ್ಷಿತ’ ಎನ್ನುತ್ತಾರೆ, ಡಾ। ಲಕ್ಷ್ಮೀನಾರಾಯಣ್‌.

ಕೊನೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವಿರುತ್ತದೆ. ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ.

ಡಾ। ಕೆ.ವಿ.ರವಿಶಂಕರ್‌

23.07.03

ಎಸ್‌.ಕೆ.ಹರಿಹರೇಶ್ವರ.

ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ:

ಡಾ। ಕೆ. ವಿ. ರವಿಶಂಕರ್‌, MBBS, DOMS, DNB, FRCS (Edin), UK.

ಉಷಾ ಕಿರಣ್‌ ಕಣ್ಣಿನ ಆಸ್ಪತ್ರೆ

ನಂ. 922, ಕಾಂತರಾಜ್‌ ಅರಸ್‌ ರಸ್ತೆ, ಲಕ್ಷ್ಮಿಪುರಮ್‌,

ಮೈಸೂರು - 570 004 ಫೋನ್‌- 2334777

ವಿವರಗಳಿಗೆ ನೋಡಿ-

http://www.geocities.com/ukehtrust/index.html

http://www.geocities.com/ukehtrust/press.html

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more