ಪರಗೋಡು ಕಿರಿಕ್ಕು : ಕೇಂದ್ರ ಸರ್ಕಾರದ ನಿಲುವಿಗೆ ಕೃಷ್ಣ ಶ್ಲಾಘನೆ
ಪರಗೋಡು ಕಿರಿಕ್ಕು : ಕೇಂದ್ರ ಸರ್ಕಾರದ ನಿಲುವಿಗೆ ಕೃಷ್ಣ ಶ್ಲಾಘನೆ
‘ವಿಶ್ವಬ್ಯಾಂಕ್‌ನಿಂದ ಇನ್ನು ಚಿಕ್ಕಾಸೂ ಸಾಲ ತೆಗೆದುಕೊಳ್ಳುವುದಿಲ್ಲ’
ಬುಧವಾರ (ಜು.23) ಸುದ್ದಿಗಾರರ ಜೊತೆ ಕೃಷ್ಣ ಅನೌಪಚಾರಿಕವಾಗಿ ಮಾತಾಡುತ್ತಿದ್ದರು. ಚಿತ್ರಾವತಿ ನದಿಗೆ ಪರಗೋಡು ಬಳಿ ಅಣೆ ಕಟ್ಟಿ ಕೋಲಾರ ಜಿಲ್ಲೆಯ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಉದ್ದೇಶ. ಇದರಿಂದ ಆಂಧ್ರಪ್ರದೇಶಕ್ಕೆ ಯಾವುದೇ ಹಾನಿಯಿಲ್ಲ. ಬಚಾವತ್ ನ್ಯಾಯಾಧಿಕರಣದ ತೀರ್ಪಿನ ‘ಎ ಸ್ಕೀಮಿ’ನ ಅನ್ವಯ ಕೃಷ್ಣಾ ನದಿಯ 734 ಟಿಎಂಸಿ ಅಡಿ ನೀರು ನಮಗೆ ಸೇರಿದ್ದು. ಆ ವಿಷಯದಲ್ಲಿ ಒಡಂಬಡಿಕೆಗೆ ಕೂರುವ ಮಾತೇ ಇಲ್ಲ. ಮಂಜ್ರಾ ನೀರಾವರಿ ಯೋಜನೆಗೆ ಆಂಧ್ರಪ್ರದೇಶ ವಿನಾ ಕಾರಣ ಅಡ್ಡಗಾಲು ಹಾಕಲು ಯತ್ನಿಸುತ್ತಿದೆ. ಇದು ತರವಲ್ಲ ಎಂದರು.
ಬೆಳೆ ವಿಮೆ ಹಣ ಪಾವತಿಗೆ ಈಗಾಗಲೇ 33 ಕೋಟಿ ರುಪಾಯಿ ಬಿಡುಗಡೆ ಮಾಡಿರುವ ಸರ್ಕಾರ ಇನ್ನೂ 45 ಕೋಟಿ ರುಪಾಯಿ ಮಂಜೂರು ಮಾಡಿದೆ. ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದ ಕೃಷ್ಣ, ಹೆಚ್ಚು ಬಾರುಗಳನ್ನು ತೆರೆಯಲು ಅನುಮತಿ ಕೊಡುತ್ತಿರುವುದಾಗಿ ವಿರೋಧ ಪಕ್ಷಗಳು ಹೊರಿಸುತ್ತಿರುವ ಆರೋಪವನ್ನು ನಿರಾಕರಿಸಿದರು.
ವಿಶ್ವಬ್ಯಾಂಕ್ ಸಾಲ ಸಾಕಪ್ಪಾ ಸಾಕು : ಸಾಲ ಮಾಡಿದ್ದು ಸಾಕಾಗಿದೆ. ಇನ್ನು ವಿಶ್ವಬ್ಯಾಂಕ್ ಮತ್ತಿತರ ಸಂಸ್ಥೆಗಳಿಂದ ಚಿಕ್ಕಾಸೂ ಸಾಲ ಮಾಡೋದಿಲ್ಲ. ಈಗಾಗಲೇ ಮಧ್ಯಂತರ ವಿತ್ತ ಯೋಜನೆಯನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರಕ್ಕೆ ಬರಬೇಕಿರುವ ಸಾಲ ಹೊರತುಪಡಿಸಿ ಬೇರೆ ಯಾವ ಸಾಲವನ್ನೂ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿರುವುದಾಗಿ ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications