ಬಯೋ ಡೈವರ್ಸಿಟಿ ಪಾರ್ಕ್‌ ಯಾಕೆ ಇನ್ನೂ ರೆಡಿಯಾಗಿಲ್ಲ ?

ಬಯೋ ಡೈವರ್ಸಿಟಿ ಪಾರ್ಕ್‌ ಯಾಕೆ ಇನ್ನೂ ರೆಡಿಯಾಗಿಲ್ಲ ?
ವರ್ಷ ತುಂಬಿದರೂ ತೆವಳುತ್ತಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

ಬೆಂಗಳೂರಿನಲ್ಲಿ ಹದಗೆಡುತ್ತಿರುವ ಪರಿಸರದ ಸಮಸ್ಯೆ. ಅದಕ್ಕಾಗಿ ಗಿಡ - ಮರ ನೆಡಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಬೆಂಗಳೂರಿನ ಹಸಿರು ವಲಯದ ಬಗ್ಗೆ ಪುನರ್‌ ಅವಲೋಕನ ನಡೆಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ಈ ಎಲ್ಲ ಚರ್ಚೆಗಳನ್ನು ನಡೆಸುವುದಕ್ಕೆ ದಂಡ ಮಾಡಿದ ಹಣದಲ್ಲಿ ಒಂದೆರಡಾದರೂ ಗಿಡ ನೆಟ್ಟಿದ್ದರೆ ಊರು ಉದ್ಧಾರವಾಗುತ್ತಿತ್ತು ಎನ್ನುವುದು ಬೇರೆ ಮಾತು. ಹಸಿರಿನ ಕುರಿತು ಚಿಂತಿಸುತ್ತಿರುವವರ ಮುಂದೆ ಸದ್ಯಕ್ಕೆ ಕಾಣಿಸುತ್ತಿರುವ ಒಂದು ಮಾರ್ಗ- ಬಿ.ಟಿ. , ಅರ್ಥಾತ್‌ ಬಯೋಟೆಕ್ನಾಲಜಿ ಅಭಿವೃದ್ಧಿ.

4.8 ಕೋಟಿ ರೂಪಾಯಿ ವೆಚ್ಚದಲ್ಲಿ ಜಯಪ್ರಕಾಶ್‌ ನಾರಾಯಣ್‌ ಬಯೋಡೈವರ್ಸಿಟಿ ಪಾರ್ಕ್‌ ನಿರ್ಮಿಸಲು ಸರಕಾರ ಉದ್ದೇಶಿಸಿತ್ತು. ಆದರೆ ಈ ಯೋಜನೆಯ ಘೋಷಣೆಯಾಗಿ ವರ್ಷ ಕಳೆದರೂ ಪಾರ್ಕ್‌ ನಿರ್ಮಾಣದ ಕಾಮಗಾರಿ ಮುಗಿದಿಲ್ಲ .

ಮತ್ತಿಕೆರೆಯಲ್ಲಿ ಬಯೋಡೈವರ್ಸಿಟಿ ಪಾರ್ಕ್‌ ಸ್ಥಾಪಿಸುವ ಪ್ರಸ್ತಾಪದ ಬಗ್ಗೆ ಸರಕಾರ ಮಾತೆತ್ತುತ್ತಿಲ್ಲ. ಜೀವ ವೈವಿಧ್ಯದ ರಕ್ಷಣೆ ಹಾಗೂ ಪ್ರವಾಸಿಗಳನ್ನು ಆಕರ್ಷಿಸುವ ಎರಡು ಉದ್ದೇಶಗಳೊಂದಿಗೆ ಈ ಪಾರ್ಕ್‌ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು.

ಪಾರ್ಕ್‌ಗಾಗಿ 83 ಎಕರೆ ಪ್ರದೇಶ ಕೊಳ್ಳುವ ವೆಚ್ಚದ ಶೇ.50ರಷ್ಟನ್ನು ರಾಜ್ಯ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನೀಡಿದೆ. ಬೆಂಗಳೂರು ನಗರ ಪಾಲಿಕೆಯು ಬಯೋಡೈವರ್ಸಿಟಿ ಪಾರ್ಕ್‌ ನ ಕೆಲಸದ ಬಗ್ಗೆ ನಿಗಮಕ್ಕೆ ಪ್ರತಿ ತಿಂಗಳು ವರದಿ ಸಲ್ಲಿಸುತ್ತಿದೆ. ಮೊದಲ ಹಂತದ ಕಾಮಗಾರಿ ಮುಗಿದಿರುವುದಾಗಿ ವರದಿ ತಿಳಿಸಿದೆ ಎಂದು ನಿಗಮದ ಇಂಜಿನಿಯರಿಂಗ್‌ ಸಲಹಾಗಾರ ಚಂದ್ರಶೇಖರ್‌ ಹೇಳಿದ್ದಾರೆ.

ಕಾಂಪೌಂಡ್‌, ಪ್ರವಾಸಿಗರಿಗಾಗಿ ಕಾಲುದಾರಿಯಂಥ ಪುಟಾಣಿ ಕೆಲಸಗಳು ನಡೆದಿರುವುದೂ ಖರೆ. ಮುಖ್ಯ ಕೆಲಸಗಳೆಲ್ಲ ಹಾಗಾಗೇ ಬಾಕಿಯಿವೆ. ಈ ಬಗ್ಗೆ ಬಿಸಿಸಿ ಏನು ಹೇಳುತ್ತದೆ ?

ಬಯೋಡೈವರ್ಸಿಟಿ ಪಾರ್ಕ್‌ನಲ್ಲಿ ಪರಿಸರದ ಬಗ್ಗೆ ಸಲಹೆ ನೀಡುವುದಕ್ಕೆ ಪರಿಸರವಾದಿ ಅ. ನ. ಯಲ್ಲಪ್ಪ ರೆಡ್ಡಿಯವರನ್ನು ನೇಮಿಸಲಾಗಿದೆ. ಅವರು ಗಿಡಗಳ ಆಯ್ಕೆಯನ್ನು ಗಮನಿಸುತ್ತಾರೆ. ಈ ವರ್ಷದ ಕೊನೆಗೆ ಬಯೋಡೈವರ್ಸಿಟಿ ಪಾರ್ಕ್‌ ರೆಡಿಯಾಗುತ್ತದೆ ಎಂಬುದು ಬಿಸಿಸಿ ನೀಡುವ ಭರವಸೆ.

ಕಾಮಗಾರಿಯ ವೇಗವನ್ನು ಪರಿಶೀಲಿಸದೇ ಇದ್ದಲ್ಲಿ ಈ ಭರವಸೆಯನ್ನು ನಂಬಬಹುದು !

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+