ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಬರ ಪೀಡಿತ 134 ತಾಲ್ಲೂಕುಗಳ ಭೂಕಂದಾಯ ಮನ್ನಾ

By Staff
|
Google Oneindia Kannada News

ರಾಜ್ಯದ ಬರ ಪೀಡಿತ 134 ತಾಲ್ಲೂಕುಗಳ ಭೂಕಂದಾಯ ಮನ್ನಾ
ಬರ ಪರಿಹಾರದಲ್ಲೂ ಗುಳುಂ ಆರೋಪ : ವಿಧಾನಮಂಡಲದಲ್ಲಿ ಗಲಾಟೆ

ಬೆಂಗಳೂರು : ರಾಜ್ಯದ 134 ಬರ ಪೀಡಿತ ತಾಲ್ಲೂಕುಗಳ ಭೂಕಂದಾಯವನ್ನು ಮನ್ನಾ ಮಾಡಿದ್ದೇವೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ (ಜು.21) ವಿಧಾನಸಭೆಯಲ್ಲಿ ಪ್ರಕಟಿಸಿದರು.

ತೀವ್ರ ಬರಕ್ಕೆ ತುತ್ತಾಗಿರುವ 66 ತಾಲ್ಲೂಕುಗಳ ಭೂಕಂದಾಯವನ್ನು ಸಂಪೂರ್ಣ ಮನ್ನಾ ಮಾಡಿದ್ದು, 68 ತಾಲ್ಲೂಕುಗಳಲ್ಲಿ ಅರ್ಧದಷ್ಟು ಕಂದಾಯ ಮನ್ನಾ ಮಾಡಿದ್ದೇವೆ ಎಂದು ಬರ ಕುರಿತ ಚರ್ಚೆಯ ನಂತರ ಉತ್ತರಿಸುತ್ತಾ ಖರ್ಗೆ ಹೇಳಿದರು. ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು, ದನಗಳಿಗೆ ಮೇವು ಒದಗಿಸಲಾಗುತ್ತಿದೆ. ಅತಿ ಸಣ್ಣ ರೈತರಿಗೆ 5521 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ಶೇ. 50ರಷ್ಟು ಸಬ್ಸಿಡಿ ದರದಲ್ಲಿ ಪೂರೈಸಲಾಗಿದೆ. ಉದ್ಯೋಗ ಸೃಷ್ಟಿಗೆ ತಕ್ಕಂಥ ಕಾರ್ಯಕ್ರಮಗಳನ್ನೂ ಸರ್ಕಾರ ಹಾಕಿಕೊಂಡಿದೆ ಎಂದು ಸಮಜಾಯಿಷಿ ಕೊಟ್ಟರು.

ಇದಕ್ಕೂ ಮುಂಚೆ ಬರ ಪರಿಹಾರ ಕಾಮಗಾರಿ ವಿಷಯದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ದನಿಯೆತ್ತಿದ ಕಾರಣ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ವಿಧಾನ ಪರಿಷತ್ತಲ್ಲಿ ಪ್ರತಿಪಕ್ಷಗಳ ಧರಣಿ
ಬರ ಪರಿಹಾರ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದನ್ನು ನೋಡಿದರೆ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಡಿ.ಎಚ್‌.ಶಂಕರಮೂರ್ತಿ ವಿಧಾನ ಪರಿಷತ್ತಿನಲ್ಲಿ ಘಂಟಾಘೋಷವಾಗಿ ಹೇಳಿದರು. ಜಂಟಿ ಸದನ ಸಮಿತಿ ರಚನೆಗೆ ಸರ್ಕಾರ ಒಪ್ಪಬೇಕೆಂದು ಸದನದಲ್ಲಿ ವಿರೋಧ ಪಕ್ಷದವರು ಧರಣಿ ಕೂತರು.

ಗಲಾಟೆಯ ವಾತಾವರಣದಲ್ಲಿ ಚರ್ಚೆಗೆ ಅವಕಾಶವೇ ಆಗಲಿಲ್ಲ. ಸಭಾಪತಿ ಬಿ.ಎಲ್‌.ಶಂಕರ್‌ ಪದೇಪದೇ ಮನವಿ ಮಾಡಿಕೊಂಡರೂ ಪರಿಸ್ಥಿತಿ ತಿಳಿಯಾಗಲಿಲ್ಲ. ಬೆಳಗಿನ ವೇಳೆಯ ಕಲಾಪವನ್ನು ಅವರು ಅನಿವಾರ್ಯವಾಗಿ ಮುಂದೂಡಿದರು. ಮತ್ತೆ 3 ಗಂಟೆಗೆ ಶುರುವಾದ ಕಲಾಪದಲ್ಲೂ ಗಲಾಟೆ ಮುಂದುವರೆಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X