ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎಸ್ಸೆಸ್‌ ಕಾಲೇಜಲ್ಲಿ ಅನನ್ಯ ಸಮಾರಂಭ

By Staff
|
Google Oneindia Kannada News

ಜೆಎಸ್ಸೆಸ್‌ ಕಾಲೇಜಲ್ಲಿ ಅನನ್ಯ ಸಮಾರಂಭ
ಹಿರಿಯ ವಿದ್ಯಾರ್ಥಿನಿಯರು ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಈ ಪರಿಯ ಕಾರ್ಯಕ್ರಮ ಎಲ್ಲ ಕಾಲೇಜುಗಳಲ್ಲೂ ನಡೆಯಲಿ.

*ದಟ್ಸ್‌ಕನ್ನಡ ಬ್ಯೂರೋ

ಕುವೆಂಪು ನನ್ನ ಮೇಷ್ಟ್ರು. ಪ್ರಭುಶಂಕರ ನನ್ನ ಜೂನಿಯರ್ರು... ಹಾಗಂತ ಹಿರಿಯರು ಮನೆಯಲ್ಲಿ ತಮ್ಮ ಕಾಲೇಜು ದಿನಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಾರೆ. ಇವತ್ತಿನ ಕಾಲೇಜಿನ ಸೀನಿಯರ್ರುಗಳೋ ಜೂನಿಯರ್ರುಗಳ ಕೈಲಿ ಮಗ್ಗಿ ಹೇಳಿಸುತ್ತಲೋ, ಅಂಗಿ ಬಿಚ್ಚಿ ಕಾಲೇಜು ಸುತ್ತ ಓಡು ಅಂತಲೋ ರ್ಯಾಂಗಿಗ್‌ ಮಾಡುತ್ತಿರುತ್ತಾರೆ. ಹಿರಿ ಶಿಷ್ಯ- ಕಿರಿ ಶಿಷ್ಯ ಪರಂಪರೆಯ ಬಗ್ಗೆ ಹಳಬರು ಗಂಟೆಗಟ್ಟಲೆ ನೆನಪುಗಳನ್ನು ಕಕ್ಕಿದರೂ ಅವೆಲ್ಲ ಹೊಸತೆನಿಸುವುದು ಈ ಕಾಂಟ್ರಾಸ್ಟಿನಿಂದಾಗಿಯೇ.

ರ್ಯಾಗಿಂಗ್‌ ಪಿಡುಗಿನ ಹಾವಳಿ ಮಟ್ಟ ಹಾಕುವುದು ಹೇಗೆ? ಕಾಲೇಜಲ್ಲಿ ಚೆಂದದೊಂದು ವಾತಾವರಣ ಹುಟ್ಟುಹಾಕಿ. ಅಲ್ಲಿ ಹಿರಿ ವಿದ್ಯಾರ್ಥಿಗಳು ಕಿರಿಯರನ್ನು ಸಭ್ಯತೆಯಿಂದ ಬರಮಾಡಿಕೊಳ್ಳುವಂಥಾ ಕಾರ್ಯಕ್ರಮ ನಡೆಸಿ. ಆಗ ಸಾಂಸ್ಕೃತಿಕವಾಗಿ ಸಜ್ಜಾಗುವ ಭರಾಟೆಯಲ್ಲಿ ರ್ಯಾಗಿಂಗ್‌ ಅನ್ನೋದು ಕಳೆದಹೋಗದಿದ್ದರೆ ಕೇಳಿ... ಹೀಗೇ ಎಲ್ಲೋ ಯಾರೋ ಸಲಹೆ ಕೊಟ್ಟಿದ್ದ ನೆನಪು.

Nagalakshmi Harihareshwaraಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್‌ ಮಹಿಳಾ ಕಾಲೇಜಲ್ಲಿ ಎಲ್ಲೋ ಕೇಳಿದ್ದ ಈ ಸಲಹೆ ಆಚರಣೆ ಬಂದಿರುವುದು ಸಂತೋಷದ ಸುದ್ದಿ. ಈ ಕಾಲೇಜಲ್ಲಿ ಜುಲೈ 19ನೇ ತಾರೀಕು ಶನಿವಾರ ಎಳೆಯರಿಗೆ ಬೆಳೆದವರು ಸ್ವಾಗತ ಕೋರುವ ಅನನ್ಯ ಕಾರ್ಯಕ್ರಮ ಆಯೋಜಿತವಾಗಿದೆ.

ಬೆಳಗ್ಗೆ 11.45 ಗಂಟೆಗೆ ಕಾರ್ಯಕ್ರಮ ಶುರುವಾಗುತ್ತದೆ. ಒಬ್ಬ ಕನ್ನಡತಿ ಅಮೆರಿಕೆಯಲ್ಲಿ ಉನ್ನತ ಶಿಕ್ಷಣ ಹೇಗೆ ಪಡೆಯಬೇಕು ಎಂಬುದನ್ನು ನಾಗಲಕ್ಷ್ಮಿ ಹರಿಹರೇಶ್ವರ ಸಮಾರಂಭದಲ್ಲಿ ವಿವರಣಾತ್ಮಕವಾಗಿ ಹೇಳುವರು. ಮೈಸೂರು ವಿಶ್ವವಿದ್ಯಾಲಯ ‘ಮಾನಸ ಗಂಗೋತ್ರಿ’ಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊಫೆಸರ್‌ ಪಿ.ಕೆ.ರಾಜಶೇಖರ್‌ ವಿದ್ಯಾರ್ಥಿನಿಯರ ಪೋಷಕರ ಪ್ರತಿನಿಧಿಯಾಗಿ ಮಾತಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್‌.ಎಸ್‌.ಶಶಿಕಲಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಪದವಿ ಮತ್ತು ಪದವಿ ಪೂರ್ವ ತರಗತಿಗಳ ಬೋಧಕ ವೃಂದ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕ್ಷಣಗಳಲ್ಲಿ ಭಾಗಿಗಳಾಗಲಿದ್ದಾರೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ತಲಾ ಒಬ್ಬೊಬ್ಬ ಹಿರಿಯ ವಿದ್ಯಾರ್ಥಿನಿಯರು ವೇದಿಕೆಯಲ್ಲಿ ಕೂರಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ವಿದ್ಯಾರ್ಥಿನಿಯರು ಹೊಸಬರಿಗೆ ಸಿಹಿ ಹಂಚುವ ಮೂಲಕ ಕಾಲೇಜಿಗೆ ಸ್ವಾಗತ ಕೋರುವರು.

ಕಾರ್ಯಕ್ರಮದ ಬಗ್ಗೆ ಅಥವಾ ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಪ್ರಾಂಶುಪಾಲರು, ಜೆಎಸ್‌ಎಸ್‌ ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು- 9. ದೂರವಾಣಿ ಸಂಖ್ಯೆ : (0821) 2540938.

ಬೇರೆ ಕಾಲೇಜುಗಳಲ್ಲೂ ಇಂಥಾ ಒಂದು ಚೆಂದದ ಸಂಪ್ರದಾಯ ಶುರುವಾಗಲೆಂದು ದಟ್ಸ್‌ಕನ್ನಡ ಹಾರೈಸುತ್ತದೆ.

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X