ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಹಣವನ್ನು ಪರ್ಜನ್ಯ ಹೋಮಕ್ಕೆ ಸುರಿದ ಮೂಢ ಸರಕಾರ

By Staff
|
Google Oneindia Kannada News

ಜನರ ಹಣವನ್ನು ಪರ್ಜನ್ಯ ಹೋಮಕ್ಕೆ ಸುರಿದ ಮೂಢ ಸರಕಾರ
ಹಣದ ಹೋಮಕ್ಕೆ ಬದಲಾಗಿ ಗಿಡಗಳನ್ನ ನೆಟ್ಟಿದ್ದರೆ ?

ನಮ್ಮದು ಹೈಟೆಕ್‌ ಸರಕಾರ. ನಮ್ಮ ಮುಖ್ಯಮಂತ್ರಿ ಐಟಿ ಬಿಟಿಗಳ ಬಗ್ಗೆ ಮಾತನಾಡುತ್ತಾರೆ. ವೀಡಿಯೋ ಕಾನ್ಫರೆನ್ಸ್‌ ಮಾಡುತ್ತಾರೆ. ಆಕ್ಸ್‌ಫರ್ಡ್‌ನಲ್ಲಿ ಓದಿದ ತಿಳುವಳಿಕಸ್ಥ ಮುಖ್ಯಮಂತ್ರಿ ಆದ್ದರಿಂದ ಆಧುನಿಕತೆಯ ಬಗ್ಗೆ ಚೆನ್ನಾಗಿ ತಿಳಕೊಂಡಿದ್ದಾರೆ... ಈ ನಮೂನೆಯ ಕ್ರೆಡಿಟ್‌ ಮುಖ್ಯಮಂತ್ರಿ ಕೃಷ್ಣರ ಒಂದು ಮುಖಕ್ಕೆ ಸಲ್ಲುತ್ತದೆ.

ಇನ್ನೊಂದು ಕಡೆ-

ಮುಖ್ಯಮಂತ್ರಿ ಪಟ್ಟವೇರಿದ್ದೇ ತಡ, ವಿಧಾನ ಸೌಧ, ಕಚೇರಿ- ಮನೆಗಳ ವಾಸ್ತು ಸರಿಯಾಗಿದೆಯೇ ಎಂದು ಕೃಷ್ಣ ಪರೀಕ್ಷಿಸುತ್ತಾರೆ. ಆರ್ಟಿಪಿಎಸ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅಲ್ಲಿಗೆ ವಾಸ್ತು ತಜ್ಞರನ್ನು ಕಳುಹಿಸಿ ಸಮಸ್ಯೆ ಏನು ಎಂಬ ಬಗ್ಗೆ ವರದಿ ಕೇಳುತ್ತಾರೆ. ರಾಜ್‌ಕುಮಾರ್‌, ನಾಗಪ್ಪನವರನ್ನು ವೀರಪ್ಪನ್‌ ಅಪಹರಿಸಿದಾಗ ಮಲೆ ಮಹದೇಶ್ವರನಿಗೆ ಅಡ್ಡಡ್ಡ ಬೀಳುತ್ತಾರೆ...

ಇಷ್ಟೇ ಅಲ್ಲ. ವಿರೋಧ ಪಕ್ಷದವರ ಹದ್ದಿನ ಕಣ್ಣಿಗೆ ಇನ್ನೊಂದು ವಿಷಯ ಕಂಡಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಸ್ಥಾನಗಳಲ್ಲಿ ಜೂನ್‌ ಐದರ ಪರಿಸರ ದಿನದಂದು ಪರ್ಜನ್ಯ ಹೋಮ ನಡೆಸುವುದಕ್ಕೆ ಎಂದು 15 ಸಾವಿರ ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು ! ಗುರುವಾರ ವಿಧಾನ ಮಂಡಲದ ಕಲಾಪದಲ್ಲಿ ಬಿಜೆಪಿ ನಾಯಕರು ಹಾಗೂ ಜನತಾ ದಳದ ಎಂ.ಪಿ. ಪ್ರಕಾಶ್‌ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ನಡವಳಿಕೆಯನ್ನು ತೆಗಳಿದರು.

ಜನರ ಹಣವನ್ನು ಹೋಮಕ್ಕೆ ಸುರಿದ ಹೈಟೆಕ್‌ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇದೇ ಸಕಾಲ ಎಂದು ಪರಿಗಣಿಸಿದ ವಿಪಕ್ಷ ನಾಯಕರು ಒಬ್ಬರಾದ ಮೇಲೆ ಒಬ್ಬರು ಕೃಷ್ಣ ಸರಕಾರವನ್ನು ಟೀಕಿಸಿದರು.

ಕೊನೆನುಡಿ: ಇದೇ 15 ಸಾವಿರ ರೂಪಾಯಿಯಲ್ಲಿ ಒಂದಿಷ್ಟು ಜಾಗ ಖರೀದಿಸಿ ಪ್ರತಿ ದೇವಸ್ಥಾನದ ಮುಂದೆ ಎರಡೆರಡು ಗಿಡ ನೆಟ್ಟು ಪೋಷಿಸಿದ್ದರೂ ಮುಂದಿನ ವರ್ಷಗಳಲ್ಲಾದರೂ ರಾಜ್ಯದಲ್ಲಿ ಮಳೆ ನಿರೀಕ್ಷಿಸಬಹುದಾಗಿತ್ತು ಅಲ್ಲವೇ ?

ನಿಮಗೇನನಿಸುತ್ತದೆ ?

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X