ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿವೇಶನದ ಮೊದಲ ದಿನ ಶ್ರದ್ಧಾಂಜಲಿ ಹೊರತು ಬೇರೇನಿಲ್ಲ

By Staff
|
Google Oneindia Kannada News

ಅಧಿವೇಶನದ ಮೊದಲ ದಿನ ಶ್ರದ್ಧಾಂಜಲಿ ಹೊರತು ಬೇರೇನಿಲ್ಲ
ಅಗಲಿದ ಗಣ್ಯರಿಗೆ ಸಂತಾಪ ಸೂಚನೆ

ಬೆಂಗಳೂರು : ಕರ್ನಾಟಕ ವಿಧಾನಮಂಡಲದ ಉಭಯ ಸದನಗಳು ಈ ಬಾರಿಯ ಅಧಿವೇಶನದ ಮೊದಲ ದಿನ (ಜು.09) ವನ್ನು ಅಗಲಿದ ಗಣ್ಯರ ಶ್ರದ್ದಾಂಜಲಿಗಷ್ಟೇ ಸೀಮಿತಗೊಳಿಸಿದವು. ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಕಾಂಗ್ರೆಸ್‌ ಸದಸ್ಯ ಕಾಶಪ್ಪನವರ್‌ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸೂಚಿಸಿದ ನಂತರ, ಬಜೆಟ್‌ ಮೇಲಿನ ಮುಂದುವರೆದ ಅಧಿವೇಶನದ ಕಲಾಪಗಳನ್ನು ನಾಳೆಗೆ ಮುಂದೂಡಲಾಯಿತು.

ಕಳೆದ ಕೆಲವು ದಿನಗಳಲ್ಲಿ ನಿಧನರಾದ ಮಾಜಿ ಸಂಸದ ಸಿ.ಎನ್‌.ಭಾಸ್ಕರಪ್ಪ ಹಾಗೂ ಮಾಜಿ ಶಾಸಕರಾದ ಶೀಲಾ ಇರಾನಿ, ಟಿ.ಪಿ.ಬೋರಯ್ಯ, ಎಸ್‌.ಅಜ್ಜಿಬಾಳ್‌ ಹೆಗಡೆ, ಕೈಸರ್‌ ಮೊಹಮ್ಮದ್‌ ಮಣಿಯಾರ್‌, ಅಬ್ದುಲ್‌ ಸುಭನ್‌, ಕೆ.ಎಂ.ಪಳಿಯಾನಿಯಪ್ಪನ್‌, ಕೆ.ಎಂ.ಗಂಗಾಲ್‌ ಮತ್ತು ಡಾ.ಕೆ.ಎಸ್‌.ಗೌಡಯ್ಯ- ಇವರೆಲ್ಲರಿಗೆ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಧಾನಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ, ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ವಿರೋಧ ಪಕ್ಷ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌, ಸಂಯುಕ್ತ ಜನತಾ ದಳದ ಮುಖಂಡರಾದ ಪಿಜಿಆರ್‌ ಸಿಂಧ್ಯ, ಬಿ.ಸೋಮಶೇಖರ್‌, ಸಿ.ಭೈರೇಗೌಡ, ಕೆ.ಕೃಷ್ಣಮೂರ್ತಿ, ಎಸ್‌.ಎಸ್‌.ಪಾಟೀಲ್‌, ಬಿಜೆಪಿಯ ಪಿ.ಎಚ್‌.ಪೂಜಾರ್‌, ಬಿ.ರಾಮದಾಸ್‌, ಚಂದ್ರಕಾಂತ್‌ ಬೆಲ್ಲದ್‌, ವಿಶ್ವೇಶ್ವರ ಹೆಗಡೆ ಮತ್ತು ಆಡಳಿತ ಪಕ್ಷ ಕಾಂಗ್ರೆಸ್‌ನ ಸಚಿವ ಅಲ್ಲಂ ವೀರಭದ್ರಪ್ಪ, ಎಸ್‌.ಜಿ.ನಂಜಯ್ಯನ ಮಠ್‌ ಇವರೆಲ್ಲ ಅಗಲಿದ ಗಣ್ಯರಿಗೆ ಒಂದು ನಿಮಿಷ ಶೋಕಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

(ಪಿಟಿಐ)

ವಾರ್ತಾ ಸಂಚಯ
ಮೂರು ಸಿಡಿಗುಂಡು ಬಂದೂಕ ಗುರಿಯಲ್ಲಿ ಮುಖ್ಯಮಂತ್ರಿ ಕೃಷ್ಣ

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X