ದೀರ್ಘಕಾಲಿಕ ವಿರಾಮಕ್ಕೆ ಬ್ರೇಕು, ಅನಿಲ್ ಕುಂಬ್ಳೆ ಮತ್ತೆ ಕಣಕ್ಕೆ
ದೀರ್ಘಕಾಲಿಕ ವಿರಾಮಕ್ಕೆ ಬ್ರೇಕು, ಅನಿಲ್ ಕುಂಬ್ಳೆ ಮತ್ತೆ ಕಣಕ್ಕೆ
ಎಂಆರ್‌ಎಫ್ ಕ್ರಿಕೆಟ್ ಟೂರ್ನಿಯಲ್ಲಿ ಅನಿಲ್ ಸ್ಪಿನ್ ತಾಲೀಮು
ಮುಂದಿನ ತಿಂಗಳು ನಗರದಲ್ಲಿ ನಡೆಯಲಿರುವ ಎಂಆರ್‌ಎಫ್‌ನ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟ ಇಲೆವೆನ್ ತಂಡದಲ್ಲಿ ಕುಂಬ್ಳೆ ಹೆಸರು ನಮೂದಾಗಿದೆ. ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಬಹುತೇಕ ಪಂದ್ಯಗಳನ್ನುಪೆವಿಲಿಯನ್‌ನಲ್ಲಿ ಕೂತು ನೋಡಿದ್ದ ಕುಂಬ್ಳೆ ನ್ಯೂಜಿಲೆಂಡ್ ಪ್ರವಾಸಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ.
ವಿಶ್ವಕಪ್ ಕ್ರಿಕೆಟ್ ನಂತರ ಕ್ರಿಕೆಟಿಗರಿಗೆ ದೀರ್ಘ ಕಾಲಿಕ ವಿರಾಮ ಸಿಕ್ಕಿದ್ದು ಒಳ್ಳೆಯದು. ಆಟಗಾರರು ಮತ್ತೆ ಚಾರ್ಜ್ ಆಗಿ ಕಣಕ್ಕೆ ಇಳಿಯುವುದು ಇದರಿಂದ ಸಾಧ್ಯವಾಗುತ್ತದೆ ಎಂದ ಅನಿಲ್ ಕುಂಬ್ಳೆ ಪರಿಸರ ಹಾಗೂ ವನ್ಯಜೀವಿ ಪ್ರೇಮಿ. ದಕ್ಷಿಣ ಆಫ್ರಿಕದ ವನಸಿರಿಯನ್ನು ಕಣ್ಣುತುಂಬಿಕೊಂಡಿರುವ ಅವರು ಈಗಲೂ ಆ ಪ್ರವಾಸದ ಗುಂಗಲ್ಲೇ ಇದ್ದಾರೆ. ದಕ್ಷಿಣ ಆಫ್ರಿಕ ಇವರಿಗೆ ಎಷ್ಟು ಹಿಡಿಸಿದೆಯೆಂದರೆ, ವಿಶ್ವ ಕಪ್‌ನಿಂದ ಮನೆಗೆ ಬಂದ ಮೇಲೆ ಇನ್ನೊಂದು ಸಲ ಅಲ್ಲಿ ರಜೆ ಕಳೆಯಲು ಹೋಗಿ ಬಂದಿದ್ದಾರೆ.
ಎಂಆರ್‌ಎಫ್ ಟೂರ್ನಿಯ 15 ಸಂಭವನೀಯ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟ ಪ್ರಕಟ ಮಾಡಿದ್ದು, ಈ ಆಟಗಾರರು ಬುಧವಾರ (ಜು.9) ದಿಂದಲೇ ಅಭ್ಯಾಸ ಶುರುಮಾಡಲಿದ್ದಾರೆ. ಕರ್ನಾಟಕ ರಣಜಿ ಕೋಚ್ ಜೆ.ಅಬ್ರಹಾಂ ಕ್ರಿಕೆಟಿಗರಿಗೆ ತರಪೇತಿ ಕೊಡಲಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications