ದಗಾಕೋರ ಮಳೆಗಾಲವೇ ಬಂದು ಬಿಡು...ಬಂದು ಬಿಡು...

ದಗಾಕೋರ ಮಳೆಗಾಲವೇ ಬಂದು ಬಿಡು...ಬಂದು ಬಿಡು...
ಎಲ್ಲಾಡ ಹೋದೆ ಮಳೆರಾಯ ನೀನು ನಮ್ಮ ಕಣ್ಣ ಮುಂದಾಡದೇ...

*ಪಾವನಿ

ದಗಾಕೋರ ಮಳೆರಾಯ ಬಾರದೇ ಇರುವುದು ಅಪರಾಧ ಅಲ್ಲವಾ. ಆದರೂ ನೋಡಿ ನಾವು ಹುಲು ಮಾನವರು ಬಾರದ ಮಳೆಗೆ ನಮ್ಮನ್ನೇ ಕಾರಣರನ್ನಾಗಿಸಿಕೊಂಡು ಮಳೆಯನ್ನು ಸ್ತುತಿಸುತ್ತೇವೆ. ಪರಿಸರ ನಾಶದಿಂದಲೇ ಮಳೆ ಮಾಯವಾಗಿದೆ ಎನ್ನುವ ಹೇಳಿಕೆ ಸರಿಯಪ್ಪಾ. ಆದರೆ ಕೆಲವರು ಮಾಡುವ ಪರಿಸರ ನಾಶಕ್ಕೆ ಎಲ್ಲರಿಗೂ ಯಾಕೆ ಈ ಶಿಕ್ಷೆ. ಅಥಣಿಯ ಹೊಲದಲ್ಲಿ ಆಕಾಶ ದಿಟ್ಟಿಸುತ್ತಿರುವ ಎಲುಬಿನ ಹಂದರದ ರೈತನಿಗೆ ಒಂದಿಷ್ಟು ನೀರು ಯಾಕೆ ಸಿಗದು ? ಈ ಮಳೆಗೆ ಜಡ್ಜ್‌ಮೆಂಟ್‌ ಮಾಡಲಿಕ್ಕೆಬರುವುದಿಲ್ಲವಾ. ಎಳ್ಳು ಕಡಲೆ ಒಟ್ಟಿಗೇ ಹುರಿಯುವ ಮಳೆಯೇ, ನಿನ್ನ ಕಣ್ಣಲ್ಲಿ ಕರುಣೆಯ ರಕ್ತ ಇಲ್ಲವಾ.

ಜೂನ್‌ ಕೊನೇ ವಾರದಲ್ಲಿ ಕರಾವಳಿಯಲ್ಲಿ ಅಟ್ಟ ಹಾಸ ಗೈದ ಮಳೆಯ ಕಾರುಬಾರು ಈಗ ಕಡಿಮೆಯಾಗಿದೆ. ಬೆಂಗಳೂರಿನಲ್ಲಂತೂ ಚಿರಿಪಿರಿ ಮಳೆಯೇ ಪ್ರಸಾದ. ಆಷಾಢ ಶುರುವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ತುಸು ಗಾಳಿ ಬೀಸುತ್ತಿರುವುದರಿಂದ ಸುಡು ಹವೆಯಿಂದ ಜನ ಬಚಾವ್‌. ಫ್ಯಾನ್‌ ಇಲ್ಲದೆಯೂ ನಿದ್ದೆ ಹೋಗುವಷ್ಟು ತಂಪಿದೆ.

ಆದರೆ ಮಳೆಗಾಲ ಎಂದರೆ ಇಷ್ಟೇನಾ ?

ಹೀಗೆ ಬರಗಾಲ ಬರಲು ಕಾರಣವೇನು ? ಎನ್ನುವ ಪ್ರಶ್ನೆಗಳು ಕಾಡುತ್ತಲೇ ದಿನಗಳು ಉರುಳುತ್ತಿವೆ. ಆರ್ಟ್‌ ಆಫ್‌ ಲಿವಿಂಗ್‌ನ ಅಧ್ಯಕ್ಷ ಅರುಣ್‌ ಮಾಧವನ್‌ ಹೇಳುವ ಪ್ರಕಾರ ಮನುಷ್ಯರು ಮಾಡಿದ ಪಾಪ ಕಾರ್ಯಗಳ ಮಿತಿ ಮೀರುತ್ತಿದೆಯಂತೆ. ‘ನಾವು ಮರಗಳನ್ನು ನಿರ್ದಯವಾಗಿ ಕಡಿಯುತ್ತೇವೆ. ಅವುಗಳಿಗೂ ಜೀವ ಇದೆ ಎನ್ನುವುದನ್ನು ಮರೆಯುತ್ತೇವೆ. ಮರಗಳನ್ನು ಅಕ್ಕರೆಯಿಂದ ಬೆಳೆಸುವ ಪದ್ಧತಿಯನ್ನೇ ಮರೆತಿದ್ದೇವೆ, ನಿಜ ಹೇಳಬೇಕೆಂದರೆ ಮರಗಳು ಹಿಂಸಾತ್ಮಕ ಮತ್ತು ಅಹಿಂಸಾತ್ಮಕ ಜನರ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲುದು. ಅದಕ್ಕೇ ಹಿಂದಿನ ಕಾಲದಲ್ಲಿ ಮರವೊಂದನ್ನು ಕಡಿಯುವ ಮುನ್ನ ಹಿರಿಯರು ಪ್ರಾರ್ಥನೆ ಮಾಡುತ್ತಿದ್ದರು. ಕ್ಷಮೆ ಕೇಳುತ್ತಿದ್ದರು. ಒಂದು ಮರ ಕಡಿದ ತಪ್ಪಿಗೆ ಐದು ಮರಗಳನ್ನು ನೆಡುತ್ತಿದ್ದರು. 300 ವರ್ಷಗಳ ಹಿಂದೆ ಹಿರಿಯರು ಪ್ರೀತಿಯಿಂದ ನೆಟ್ಟು ಬೆಳೆಸಿದ ಮರಗಳನ್ನು ನಾವು ಇವತ್ತು ನಿರ್ದಯದಿಂದ ಕಡಿಯುತ್ತಿದ್ದೇವೆ. ಆ ಕಾರಣಕ್ಕೇ ಮಳೆ ದೂರ ಉಳಿದಿದೆ’ ಎಂದು ಬರಗಾಲದ ಹಿಂದಿನ ಸೆಂಟಿಮೆಂಟಲ್‌ ಹಾಗೂ ವೈಜ್ಞಾನಿಕ ಕಾರಣವನ್ನು ಅವರು ವಿವರಿಸುತ್ತಾರೆ.

‘ನೀರು ಮನುಷ್ಯನನ್ನು ಅರ್ಥ ಮಾಡಿಕೊಳ್ಳಬಲ್ಲುದು. ನೀರಿಗೆ ತಗ್ಗಿ ಬಗ್ಗಿ ನಡೆದಷ್ಟೂ ಅವು ನಮ್ಮ ಬಳಿ ಬರುತ್ತದೆ. ಬರಗಾಲವನ್ನು ದೂರಾಗಿಸುವಂತೆ ಮೊರೆಯಿಟ್ಟು ಮಾಡುವ ಪ್ರಾರ್ಥನೆ ನೀರನ್ನು ತಲುಪುತ್ತದೆ’ ಎಂಬುದು ಮಾಧವನ್‌ ನಂಬಿಕೆ.

ಹೌದು. ರಾಜ್ಯದಲ್ಲಿ ಸತತವಾಗಿ ಬರಗಾಲ ಬರುತ್ತಿದೆ ಎಂಬ ದೂರು, ಬರಗಾಲ ಪರಿಹಾರ ಕಾಮಗಾರಿಗಳ ವಿಷಯದಲ್ಲಿ ರಾಜಕೀಯ ಕಚ್ಚಾಟ,ನೀರಿಗಾಗಿ ಜನರ ಗೋಳಾಟದ ಹೊರತಾಗಿ ಯಾಕೆ ಇಂಥ ಪರಿಸ್ಥಿತಿ ಬಂತು ಎಂಬ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಪರಿಸರವಾದಿಗಳೂ ಕೂಡ ಬರಗಾಲದ ಹಿಂದಿರುವ ಕಾರಣದ ಅಧ್ಯಯನ ಹಾಗೂ ಅದಕ್ಕೆ ಪರಿಹಾರ ಸೂಚಿಸುವ ಗೋಜಿಗೆ ಹೋಗಿಲ್ಲ. ನೀರಿಲ್ಲ ಎಂಬ ಹಾಹಾಕಾರದ ನಡುವಿನಿಂದ ಈಗ ಬರಬೇಕಾದ ಧ್ವನಿ- ಯಾಕೆ ನೀರಿಲ್ಲದೇ ಹೋಯಿತು... ಎಂಬ ಪ್ರಶ್ನೆಗೆ ಉತ್ತರ !

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+