ಮಹಿಳಾಬ್ಯಾಂಕ್ ಅಧ್ಯಕ್ಷತೆಯಿಂದ ಲೇಖಕಿ ಶೈಲಜಾಉಡಚಣ ವಜಾ
ಮಹಿಳಾಬ್ಯಾಂಕ್ ಅಧ್ಯಕ್ಷತೆಯಿಂದ ಲೇಖಕಿ ಶೈಲಜಾಉಡಚಣ ವಜಾ
ಬಯಲಾದ ಅಕ್ಕ ಪ್ರಶಸ್ತಿ ವಿಜೇತೆಯ ಅವ್ಯವಹಾರಗಳು
ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಉಡಚಣ ಅವರ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ನಂತರ ವಜಾ ಆದೇಶ ಹೊರಡಿಸಿದ್ದಾರೆ. ವಜಾ ಆದೇಶದ ಪ್ರಕಾರ ಉಡಚಣ ಅವರು ಇನ್ನು ಐದು ವರ್ಷದವರೆಗೆ ಯಾವುದೇ ಸಹಕಾರಿ ಸಂಘಗಳ ಆಡಳಿತ ಮಂಡಳಿಯ ಸದಸ್ಯರಾಗುವುದನ್ನು ನಿಷೇಧಿಸಲಾಗಿದೆ.
ಬ್ಯಾಂಕ್‌ನಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ ಲೇಖಕಿ ಶೈಲಜಾ ಉಡಚಣ ಅವರು ಈಗ ಬ್ಯಾಂಕಿನ ಪಾಲುದಾರರಲ್ಲಿ ಹಾಗೂ ಸದಸ್ಯರ ಮನೆಗಳಿಗೆ ಹೋಗಿ ಬ್ಯಾಂಕ್ ಮುಚ್ಚುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸಿ, ಅಮಾಯಕ ಮಹಿಳೆಯರ ದಾರಿ ತಪ್ಪಿಸುತ್ತಿದ್ದಾರೆ.
ನಾಲ್ಕು ಲಕ್ಷ ರೂಪಾಯಿಗಳಷ್ಟು ಲಾಭದಲ್ಲಿ ನಡೆಯುತ್ತಿರುವ ಬ್ಯಾಂಕ್ ಬಗ್ಗೆ ವೈಯಕ್ತಿಕ ಲಾಭಕ್ಕಾಗಿ ಉಡಚಣ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಮಿತಿಯ ಸಂಚಾಲಕಿ ನೀಲಾ ಕೆ. ದೂರಿದ್ದಾರೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಶೈಲಜ ಉಡಚಣರಿಗೆ ಅಕ್ಕ ಪ್ರಶಸ್ತಿ
ಮುಖಪುಟ / ವಾರ್ತೆಗಳು












Click it and Unblock the Notifications