ಎನ್‌ಜಿಇಎಫ್‌, ಮೈಸೂರ್‌ಲ್ಯಾಂಪ್ಸ್‌ಗೆ ದಿಡ್ಡಿ ಬಾಗಿಲು

ಬೆಂಗಳೂರು : ಸಾರ್ವಜನಿಕ ವಲಯದ ನ್ಯೂ ಗೌರ್ನ್‌ಮೆಂಟ್‌ ಇಲೆಕ್ಟ್ರಿಕ್‌ ಫ್ಯಾಕ್ಟರಿ (ಎನ್‌ಜಿಇಎಫ್‌) ಮತ್ತು ಮೈಸೂರ್‌ ಲ್ಯಾಂಪ್ಸ್‌ ಉದ್ದಿಮೆಗಳಿಗೆ ದಿಡ್ಡಿ ಬಾಗಿಲು ಹಾಕಲು ಸರ್ಕಾರ ಅಂತಿಮವಾಗಿ ನಿರ್ಧರಿಸಿದೆ.

ಸಾರ್ವಜನಿಕ ವಲಯದ ಉದ್ದಿಮೆಗಳ ಪುನರುಜ್ಜೀವನಾ ಸಮಿತಿ ಸಾಕಷ್ಟು ಚರ್ಚಿಸಿ, ಈ ಕಂಪನಿಗಳಿಗೆ ಪುನಶ್ಚೇತನ ತುಂಬುವುದು ಸಾಧ್ಯವೇ ಇಲ್ಲ ಎಂದು ಇತ್ತೀಚೆಗೆ ತೀರ್ಮಾನಿಸಿದ್ದಾರೆ. ಹೀಗಾಗಿ ಎನ್‌ಜಿಇಎಫ್‌ನ 119 ಹಾಗೂ ಮೈಸೂರ್‌ ಲ್ಯಾಂಪ್ಸ್‌ನ 523 ನೌಕರರನ್ನು ಸ್ವಯಂ ನಿವೃತ್ತಿ ಯೋಜನೆಯಡಿ ಮನೆಗೆ ಕಳುಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಸೋಮವಾರ (ಮೇ 12) ಸುದ್ದಿಗಾರರಿಗೆ ಹೇಳಿದರು.

ಸ್ವಯಂ ನಿವೃತ್ತಿ ಯೋಜನೆಯನ್ನು ಧಿಕ್ಕರಿಸುವ ನೌಕರರನ್ನು ಮೇ 31ರಿಂದ ಅನಾಮತ್ತು ಕೆಲಸದಿಂದ ವಜಾ ಮಾಡುವ ಕಠಿಣ ನಿಲುವು ತೆಗೆದುಕೊಂಡಿದ್ದೇವೆ ಎಂದು ಚಂದ್ರೇಗೌಡ ಎಚ್ಚರಿಸಿದರು.

ಗ್ರಾಮೀಣ ಕೃಪಾಂಕ ಗೊಂದಲಕ್ಕೆ ಪರಿಹಾರದ ಚಿಂತನೆ : ಗ್ರಾಮೀಣ ಕೃಪಾಂಕ ಪಡೆದು ಸರ್ಕಾರಿ ಕೆಲಸಕ್ಕೆ ಸೇರಿರುವ ಸುಮಾರು 13,500 ನೌಕರರ ಭವಿಷ್ಯ ಡೋಲಾಯಮಾನವಾಗಿದೆ. ಹೀಗೆ ನೇಮಕವಾಗಿರುವ ನೌಕರರನ್ನು ಕೆಲಸದಿಂದ ತೆಗೆಯಬೇಕೆಂದು ಸುಪ್ರಿಂಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ. ಈ ಗೊಂದಲಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಯಾವುದಾದರೂ ದಾರಿ ಕಾಣುತ್ತದೆ ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ ಚಂದ್ರೇಗೌಡ ಆಶಾಭಾವನೆ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+