ಉಮಾಶ್ರೀ ಅಳಿಯ ಡಾ.ರಮೇಶ್‌ಗೆ ಅಮೆರಿಕ ಪ್ರಶಸ್ತಿ
ಬೆಂಗಳೂರು: ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನ ರೀಡರ್ ಡಾ. ಎನ್.ರಮೇಶ್ ಅವರಿಗೆ ಅಮೆರಿಕಾದ ವರ್ಜೀನಿಯಾದ ಸಂಶೋಧನ ಸಂಸ್ಥೆಯ ಪ್ರತಿಷ್ಠಿತ ಪುರಸ್ಕಾರ ದೊರೆತಿದೆ.
ವರ್ಜೀನಿಯಾ ಸಂಸ್ಥೆಯ ಅಂತರರಾಷ್ಟ್ರೀಯ ದಂತ ವೈದ್ಯಕೀಯ ಸಂಶೋಧನಾ ಸಂಸ್ಥೆಯ 2003 ‘ರಿಸರ್ಚ್ ಇನ್ ಪ್ರಿವೆನ್ಶನ್’ ಪ್ರಶಸ್ತಿಯು ಡಾ.ರಮೇಶ್ ಅವರಿಗೆ ದೊರೆತಿದ್ದು - ಇದರಿಂದಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಏಷ್ಯಾದ ಮೊದಲ ಪ್ರಜೆ ಎಂಬ ಖ್ಯಾತಿ ರಮೇಶ್ ಅವರಿಗೆ ಸಂದಿದೆ.
ದಾವಣಗೆರೆಯ ಸುತ್ತ ಮುತ್ತಲ ಪ್ರದೇಶದ ಮಕ್ಕಳಲ್ಲಿ ಹುಳುಕು ಹಲ್ಲಿನ ಹಾವಳಿ ಕುರಿತಂತೆ ರಮೇಶ್ ನಡೆಸಿದ ಸಂಶೋಧನೆಯನ್ನು ವರ್ಜೀನಿಯಾ ವಿ.ವಿ. ಗುರುತಿಸಿದೆ. ದಾವಣಗೆರೆಯ ಕೆ.ಪಿ.ಟಿ.ಸಿ. ಎಲ್. ನಿವೃತ್ತ ಇಂಜಿನಿಯರ್ ನಾಗರಾಜಪ್ಪನವರ ಮಗನಾದ ರಮೇಶ್ ಅವರು ನಟಿ ಉಮಾಶ್ರೀ ಅವರ ಅಳಿಯ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications