ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಹೊಸನೀರು

ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ಈಗ ಹೊಸ ನೀರು. ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಹುದ್ದೆಗಳಿಗೆ ಮಾರ್ಚ್‌ 30ರ ಭಾನುವಾರ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಆಯ್ಕೆ ಆಗಿದ್ದಾರೆ.

ಎಚ್‌.ಆರ್‌. ರಂಗನಾಥ್‌ ( ಕನ್ನಡಪ್ರಭ), ಕೆ. ಶಿವಸುಬ್ರಮಣ್ಯ ( ಕನ್ನಡಪ್ರಭ), ಎಂ. ಜಯರಾಮ ಅಡಿಗ ( ಕನ್ನಡಪ್ರಭ) ಗುರುಮೂರ್ತಿ ಎಂ.ಎನ್‌. ( ಉದಯವಾಣಿ) ಮಂಜುನಾಥ್‌ ಚಾಂದ್‌ ( ಉದಯ ಟಿವಿ ) , ಉದಯಶಂಕರ ಭಟ್‌ ( ಪ್ರಜಾವಾಣಿ), ಮುಂಜಾನೆ ಸತ್ಯ ( ಉದಯ ಟಿವಿ) , ಗಂಗಾಧರ ಮೊದಲಿಯಾರ್‌ ( ಪ್ರಜಾವಾಣಿ) , ವಿ.ನಾಗರಾಜ್‌ (ಪ್ರಜಾವಾಣಿ), ಕೇಶವ ಗುರುನಾಥ ಜಿಂಗಾಡೆ ( ಪ್ರಜಾವಾಣಿ) ರಾಮಣ್ಣ ಎಚ್‌. ಕೋಡಿಹೊಸಹಳ್ಳಿ ( ಬಹುಜನ ಕನ್ನಡಿಗರು )

ಶಶಿಪ್ರಭ ಹಿರೇಮಠ ( ಸಂಜೆವಾಣಿ) ಮತ್ತು ಎಂ.ಎಸ್‌. ರಾಜೇಂದ್ರಕುಮಾರ್‌ (ಪ್ರಜಾವಾಣಿ) ಅವರು ಎರಡು ಮೀಸಲು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

1200 ಸದ-ಸ್ಯ ಬಲ-ವ-ನ್ನು ಹೊಂದಿ-ರು-ವ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಒಟ್ಟು 11 ಮಂದಿ ನಿರ್ದೇಶಕ ಸ್ಥಾನಗಳಿಗೆ 18 ಹುರಿಯಾಳುಗಳು ಸ್ಪರ್ಧಿಸಿದ್ದರು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯನಿರ್ವಾಹಕ ನಿರ್ದೇಶಕ, ಖಜಾಂಚಿ, ಆಂತರಿಕ ಲೆಕ್ಕ ಪರಿಶೋಧಕ ಮುಂತಾದ ಸ್ಥಾನಗಳನ್ನು ನಿರ್ದೇಶಕ ಮಂಡಳಿ ಸಭೆ ಸೇರಿ ನಿರ್ಧರಿಸುತ್ತದೆ.

ಇಸವಿ 1949 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಹಕಾರ ಸಂಘ ಪರಸ್ಪರ ಸಹಕಾರದ ಮೂಲಕ ಸ್ವಾವಲಂಬನೆ ಪಡೆಯಲು ಪತ್ರಕರ್ತರಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಕೆಂಪೇಗೌಡ ರಸ್ತೆಯ ತಾಲೂಕು ಕಚೇರಿ ಆವರಣದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಒಂದು ಕೊಠಡಿಯಲ್ಲಿ ಲಾಗಾಯ್ತಿನಿಂದ ಕಾರ್ಯನಿರ್ವಹಿಸುತ್ತಿದ್ದ ಸಂಘ ಕಳೆದ ವಾರವಷ್ಟೆ ನೂತನ ಆದರೆ, ಸ್ವಂತ ಕಚೇರಿಗೆ ಸ್ಥಳಾಂತರ ಗೊಂಡಿದೆ.

ಕಚೇರಿ ವಿಳಾಸ : 11/4, ಸುವರ್ಣ ಭವನ, ಕ್ವೀನ್ಸ್‌ ರಸ್ತೆ, ಬೆಂಗಳೂರು-60052.

(ಇ-ನ್ಫೋ ವಾರ್ತೆ )

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+