ಉಡುಪಿ ಕೃಷ್ಣನಿಗೆ ಮಾರ್ಚ್‌ 8 ರಂದು ವಜ್ರಕವಚ

ಉಡುಪಿ : ಜಗತ್ಪ್ರಸಿದ್ಧ ಉಡುಪಿಯ ಶ್ರೀಕೃಷ್ಣನಿಗೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮಾರ್ಚ್‌.8ರಂದು ವಜ್ರಕವಚವನ್ನು ಸಮರ್ಪಿಸುವರು.

ವಜ್ರಕವಚವನ್ನು ಅದ್ದೂರಿ ಮೆರವಣಿಗೆಯಲ್ಲಿ ಉಡುಪಿಯ ಪ್ರಮುಖ ಬೀದಿಗಳಲ್ಲಿ ಮಾ.8ರಂದು ಮೆರವಣಿಗೆ ಮಾಡಲಾಗುವುದು. ಕಿನ್ನಿಮೂಲ್ಕಿ ಸ್ವಾಗತ ಗೋಪುರ, ತಾಲೂಕು ಕಚೇರಿ, ಡಯಾನ, ಕವಿ ಮುದ್ದಣ ಮಾರ್ಗ, ಕಿದಿಯೂರು ಹೊಟೇಲ್‌, ಮಸೀದಿ ಮಾರ್ಗ, ಮೆಸ್ಕಾಂ ಕಚೇರಿ, ತೆಂಕಪೇಟೆ ಮೂಲಕ ವಜ್ರ ಕವಚದ ಮೆರವಣಿಗೆ ರಥಬೀದಿಯನ್ನು ಪ್ರವೇಶಿಸಲಿದೆ.

ಸಾಂಸ್ಕೃತಿಕ ಸ್ತಬ್ಧಚಿತ್ರಗಳು, ಹುಲಿವೇಷ, ವೀರಗಾಸೆ, ಡೊಳ್ಳುಕುಣಿತ, ಕೋಲ, ಚೆಂಡೆ ಹೀಗೆ ನಾನಾ ವೈವಿಧ್ಯಮಯ ಪ್ರದರ್ಶನಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದು - ಎನ್‌ಸಿಸಿ, ಸ್ಕೌಟ್ಸ್‌ ತಂಡಗಳೂ ಮೆರವಣಿಗೆ ವೈವಿಧ್ಯತೆ ಹೆಚ್ಚಿಸಲಿವೆ. ನಿವೃತ್ತ ಸೈನಿಕರ ಪಥ ಸಂಚಲನ ಹಾಗೂ ಭಜನಾ ತಂಡಗಳ ಪ್ರದರ್ಶನ ಮೆರವಣಿಗೆಯ ವಿಶೇಷ ಆಕರ್ಷಣೆ ಎಂದು ಮೆರವಣಿಗೆಯ ಸಂಚಾಲಕ ಭುವನೇಂದ್ರ ಕಿದಿಯೂರ್‌ ಮತ್ತು ಕಬ್ಯಾಡಿ ಜಯರಾಮ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+