ಮೂಡಿಗೆರೆಯ ಕಾಡಿನಲ್ಲಿ ಸಮೃದ್ಧ ಗಾಂಜಾ ಬೆಳೆ
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಾಳೂರು ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 10 ಟನ್ ಗಾಂಜಾ ಬೆಳೆಗಳನ್ನು ಗುರುತಿಸಿದ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಅವುಗಳನ್ನು ನಾಶ ಮಾಡಿದ್ದಾರೆ.
ಗೋಣಿ ಬೀಡು ಹೋಬಳಿ ಊರುಬಗೆ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಬಾಳೂರು ರಾಜ್ಯ ಮೀಸಲು ಅರಣ್ಯದ ಆರು ಎಕರೆ ಪ್ರದೇಶದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಇದರ ಸುಳಿವು ದೊರೆತ ಅರಣ್ಯಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರ ನೆರವಿನಿಂದ ಸುಮಾರು ಹತ್ತು ಅಡಿ ಎತ್ತರ ಬೆಳೆದ ಫಲಭರಿತ ಹಾಗೂ ಹೂ ಬಿಟ್ಟ ಗಾಂಜಾ ಗಿಡಗಳನ್ನು ನಾಶ ಮಾಡಿದರು. ಕಟಾವಿಗೆ ಸಿದ್ಧವಾದ ಹತ್ತು ಟನ್‌ಗೂ ಹೆಚ್ಚು ಗಾಂಜಾ ಗಿಡಗಳನ್ನು ಕಿತ್ತು ಹಾಕಲಾಗಿದೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆದರೆ ಆಸು ಪಾಸಿನಲ್ಲಿ ದೊರೆತ ಟಿಕೇಟುಗಳು ಹಾಗೂ ಪುಸ್ತಕಗಳ ಸುಳಿವಿನ ಮೇರೆಗೆ ಈ ಆರೋಪಿಗಳು ಕೇರಳದವರು ಎಂದು ಶಂಕಿಸಲಾಗಿದೆ. ನಾಶ ಪಡಿಸಿದ ಗಾಂಜಾ ಗಿಡಗಳ ಮೌಲ್ಯ ಸುಮಾರು 60 ಲಕ್ಷ ರೂಪಾಯಿ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications