‘ಬಯೋಟೆಕ್ ಉಪಕರಣಗಳ ಆಮದು ಸುಂಕ ತಗ್ಗಿಸಿ’ಬಜೆಟ್
ಆಗಸ್ಟ್ 31, ಶನಿವಾರ ಮುಂಜಾನೆ ‘ಕೋಬೊ ಹಾಲ್'ಗೆ ಬೇಗನೆ ಹೋದೆವು. ಅಲ್ಪೋಪಹಾರದ ತರುವಾಯ ಅಮೇರಿಕೆಯ ಎಲ್ಲ ಕನ್ನಡ ಸಂಘಗಳ ಮೆರವಣಿಗೆ ಇತ್ತು. ಕಳೆದ ಸಲ ಅದಕ್ಕೆ ‘ದಸರಾ ಮೆರವಣಿಗೆ' ಎಂದು ಕರೆದಿದ್ದರು; ಅಲ್ಲದೆ, ಜಂಬೂ-ಸವಾರಿಗಾಗಿ ಒಂದು ಪುಟ್ಟ ಆನೆಯ ಪ್ರತಿಕೃತಿಯನ್ನೇ ತಂದಿದ್ದರು.
ಈ ಸಲ ಆ ವೈಭವವಿರಲಿಲ್ಲ. ಅಮೇರಿಕೆಯಲ್ಲಿಯ ವಿವಿಧ ಕನ್ನಡ ಸಂಘಗಳ ಸದಸ್ಯರು ತಮ್ಮ ಬ್ಯಾನರ್ ಹಿಡಿದುಕೊಂಡು ದೇಶೀ ಉಡುಪುಗಳಲ್ಲಿ ಬಂದು ಮೆರವಣಿಗೆಯಲ್ಲಿ ಪಾಲುಗೊಂಡು ತಮ್ಮ ಉತ್ಸಾಹ ಪ್ರದರ್ಶಿಸಿದರು. ಅತಿಥಿಗಳೂ ಅದರಲ್ಲಿ ಭಾಗವಹಿಸಿದರು. ಮಹಿಳೆಯರ ಉತ್ಸಾಹ ಹೆಚ್ಚು ಎದ್ದು ಕಾಣುತ್ತಿತ್ತು. ಸಭಾಗೃಹದಲ್ಲಿ ಮೊದಲು ಅಮೇರಿಕೆಯ ರಾಷ್ಟ್ರಗೀತೆ ನುಡಿಸಲಾಯ್ತು. ನಂತರ ಭಾರತದ ರಾಷ್ಟ್ರಗೀತೆ.
ದೀಪ ಹಚ್ಚಿದ ಮೇಲೆ ‘ಹಚ್ಚೇವು ಕನ್ನಡದ ದೀಪ', ‘ನಿತ್ಯೋತ್ಸವ', ‘ಜೋಗದ ಸಿರಿ' ಹಾಡುಗಳ ಸಂಭ್ರಮ. ರೂಢಿಯಂತೆ ಸ್ವಾಗತ ಭಾಷಣಗಳಾದವು. ಅಕ್ಕ ಅಧ್ಯಕ್ಷರಾದ ಅಮರನಾಥ ಗೌಡ್, ಸಮ್ಮೇಳನದ ಸಂಚಾಲಕರಾದ ಕುದೂರು ಮುರಳಿ ಅವರ ಭಾಷಣಗಳಾದವು. ವಿಶೇಷ ಅತಿಥಿಯಾಗಿ ಆಗಮಿಸಿದ ಭಾರತದ ರಾಯಭಾರಿ ಲಲಿತ್ ಮಾನ್‌ಸಿಂಗ್ ಅವರು ಭಾಷಣ ಮಾಡಿದರು. ಅವರ ಪರಿಚಯವನ್ನು ರಮೇಶ ಗೌಡ್ ಅವರು ಮಾಡಿದರು.
ಲಲಿತ್ ಸಿಂಗ್ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ ‘ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ಅಭಿನಂದನೆ' ಎಂದಾಗ ಪ್ರೇಕ್ಷಕ ಸ್ತೋಮ ಕರತಾಡನದಿಂದ ಅವರನ್ನು ಸ್ವಾಗತಿಸಿತು. ಲಲಿತ್ ಮಾನ್‌ಸಿಂಗ್ ಅವರು ನಂತರ ಇಂಗ್ಲೀಷಿನಲ್ಲಿ ಚೆನ್ನಾಗಿ ಮಾತಾಡಿದರು. ಬಹುಸಂಖ್ಯೆಯಲ್ಲಿ ಬಂದಿದ್ದ ವಿಧಾನ ಸಭೆಯ ಸದಸ್ಯರನ್ನು, ಮಂತ್ರಿ ರಾಣಿ ಸತೀಶರನ್ನು, ಅಕ್ಕ ಅಧ್ಯಕ್ಷ ಅಮರನಾಥ ಗೌಡ್, ಅತಿಥಿ ಕವಿ ನಿಸಾರ್ ಅಹಮದರನ್ನು ಉದ್ದೇಶಿಸಿ, ನೆರೆದ ಕನ್ನಡ ಜನಸ್ತೋಮವನ್ನು ಅಭಿನಂದಿಸಿ ಮಾತನಾಡಿದರು. ‘ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಗೆ ನೆರೆದ ಬಹು ದೊಡ್ಡ ಜನರ ಗುಂಪನ್ನು ಉದ್ದೇಶಿಸಿ ಮಾತಾಡಲು ನನಗೆ ಆನಂದ ಆಗುತ್ತಿದೆ.
ಭಾರತದ ಪ್ರತಿಯಾಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪಡೆದಿದೆ. ಅಶೋಕನ ತರುವಾಯ ದಕ್ಷಿಣದಲ್ಲಿ ಶಾತವಾಹನರು ಮೆರೆದರು. ಕರ್ನಾಟಕ ಎಂದೊಡನೆ ಶ್ರವಣ ಬೆಳ್ಗೊಳದ ಗೊಮ್ಮಟೇಶ್ವರ, ಚಾಲುಕ್ಯರ ಬದಾಮಿ, ಪಟ್ಟದಕಲ್ಲು, ಐಹೊಳೆಯ ಶಿಲ್ಪದ ನೆನಪಾಗುತ್ತದೆ. ನಂತರ ಬಂದ ರಾಷ್ಟ್ರಕೂಟರ ಅಜಂತಾ-ಎಲ್ಲೋರಾ, ಕೈಲಾಸ ದೇವಾಲಯ ನೆನಪಾಗುತ್ತದೆ. ನಂತರ ನಾಲ್ಕು ನೂರು ವರುಷಗಳ ಅಸ್ಥಿರತೆಯ ನಂತರ ಬಂದ ವಿಜಯನಗರ ಸಾಮ್ರಾಜ್ಯವನ್ನು, ಕೃಷ್ಣದೇವರಾಯನನ್ನು ಯಾರೂ ಮರೆಯುವಂತಿಲ್ಲ.
-
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications