ಭಾರತದಲ್ಲಿ 2000 ಕೋಟಿ ರು. ಬಂಡವಾಳ-ಗೇಟ್ಸ್
ನವದೆಹಲಿ : ಮುಂದಿನ ಮೂರು ವರ್ಷಗಳಲ್ಲಿ 2000 ಕೋಟಿ ರುಪಾಯಿ ಬಂಡವಾಳವನ್ನು ಭಾರತದಲ್ಲಿ ತೊಡಗಿಸುವ ಯೋಜನೆಯನ್ನು ತಾವು ಹೊಂದಿರುವುದಾಗಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್‌ಗೇಟ್ಸ್ ತಿಳಿಸಿದ್ದಾರೆ.
ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಹಣ ತೊಡಗಿಸಲಿದೆ ಎಂದು ತಮ್ಮ ಭಾರತ ಭೇಟಿಯ ಎರಡನೇ ದಿನವಾದ ಮಂಗಳವಾರ (ನ.12) ಸುದ್ದಿಗಾರರೊಂದಿಗೆ ಮಾತನಾಡಿದ ಬಿಲ್ ಗೇಟ್ಸ್ ಹೇಳಿದರು.
ಸವಾಲುಗಳ ಯುಗದಲ್ಲಿ ನಾವಿದ್ದು , ವಿಸ್ತುತ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆಯನ್ನು ಭಾರತ ಸರ್ಕಾರ ಕಲ್ಪಿಸುವ ಕುರಿತು ಗೇಟ್ಸ್ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್ ಮಹಾಜನ್ ಅವರನ್ನು ಮಂಗಳವಾರ ಗೇಟ್ಸ್ ಭೇಟಿ ಮಾಡಿ ಮಾತುಕತೆ ನಡೆಸಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications