ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5.5 ಲಕ್ಷ ಶಿಕ್ಷಕರ ಪುನಃ ತರಬೇತಿಗೆ ಪ್ರೇಂಜಿ ಪಂಚವಾರ್ಷಿಕ ಯೋಜನೆ

By Staff
|
Google Oneindia Kannada News

ಬೆಂಗಳೂರು : ಪ್ರಸಕ್ತ ಹಾಗೂ ಮುಂದಿನ ಜನಾಂಗಕ್ಕೆ ಗುಣಾತ್ಮಕ ಶಿಕ್ಷಣವನ್ನು ನೀಡುವುದರಿಂದ ಮಾತ್ರ ದೇಶದ ಏಳಿಗೆ ಸಾಧ್ಯ ಎಂದು ಪ್ರತಿಪಾದಿಸಿರುವ ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷ ಅಜೀಂ ಪ್ರೇಂಜಿ, ಮುಂದಿನ 5 ವರ್ಷಗಳಲ್ಲಿ 5.5 ಲಕ್ಷ ಶಿಕ್ಷಕರನ್ನು ಪುನಃ ತರಬೇತುಗೊಳಿಸುವುದಾಗಿ ಹೇಳಿದ್ದಾರೆ.

ಶಿಕ್ಷಣದಲ್ಲಿ ಗುಣಮಟ್ಟಕ್ಕಾಗಿ ರಚಿಸಿರುವ ವಿಪ್ರೋ ವೇದಿಕೆಯ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅಜೀಂ ಪ್ರೇಂಜಿ, ಗುಣಾತ್ಮಕ ಶಿಕ್ಷಣ ಕಲ್ಪಿಸಲು ವೇದಿಕೆ ಶ್ರಮಿಸುತ್ತದೆ ಎಂದರು. ನಮ್ಮ ಶಿಕ್ಷಕರನ್ನು ಹೊಸ ರೀತಿಯ ಕಲಿಕೆ ಹಾಗೂ ಕಲಿಸುವ ಬಗೆಯಲ್ಲಿ ಸಜ್ಜುಗೊಳಿಸಬೇಕಾಗಿದೆ. ಸಮಸ್ಯೆಯ ಸೃಷ್ಟಿ ಹಾಗೂ ಪರಿಹಾರ ಕುರಿತು ವಿದ್ಯಾರ್ಥಿಗಳು ಯೋಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಶಿಕ್ಷಕರನ್ನು ತರಬೇತುಗೊಳಿಸಬೇಕು ಎಂದು ಪ್ರೇಂಜಿ ಹೇಳಿದರು.

ಶಿಕ್ಷಣದೊಂದಿಗೆ ಶಿಕ್ಷಣದ ಇತರ ಆಯಾಮಗಳಾದ ಪಠ್ಯಕ್ರಮ, ಮೌಲ್ಯಮಾಪನ, ಶಿಸ್ತು ಇತ್ಯಾದಿಗಳೂ ಬದಲಾಗಬೇಕು. ಇಂಥ ಬದಲಾವಣೆ ಅತ್ಯಂತ ಗರಿಷ್ಠ ಮಟ್ಟದಲ್ಲಿರಬೇಕು. ಶಾಲಾ ಕೊಠಡಿಯಲ್ಲಿ ಶಿಕ್ಷಕನು ಬದಲಾವಣೆಯ ಪ್ರಮುಖ ವಾಹಕನಾಗಿದ್ದು , ಶಿಕ್ಷಕನಿಗೆ ಬೆಂಬಲವಾಗಿ ಶಾಲಾ ವ್ಯವಸ್ಥೆ , ಶೈಕ್ಷಣಿಕ ಮಂಡಳಿಗಳು, ಹಾಗೂ ಪ್ರಾಂತೀಯ ಮತ್ತು ರಾಷ್ಟ್ರೀಯ ಮಂಡಳಿಗಳು ನಿಲ್ಲಬೇಕು ಎಂದರು.

ಶಿಕ್ಷಣವನ್ನು ಬಲಪಡಿಸುವ ಕಾರ್ಯ ಪ್ರಾಥಮಿಕ ಹಂತದಿಂದಲೇ ನಡೆಯಬೇಕು. ಈ ನಿಟ್ಟಿನಲ್ಲಿ ವಿಪ್ರೋ ವೇದಿಕೆ ಬೌದ್ಧಿಕ ಹಾಗೂ ಕ್ರಿಯಾತ್ಮಕ ಚರ್ಚೆಗಳನ್ನು ಏರ್ಪಡಿಸುತ್ತದೆ. ಶಿಕ್ಷಣದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರೇಂಜಿ ಹೇಳಿದರು.

ಶಿಕ್ಷಕರನ್ನು ಪುನಃ ತರಬೇತಿಗೊಳಿಸುವ ಯೋಜನೆಗೆ ವಿಪ್ರೋ 5 ವರ್ಷಗಳ ಅವಧಿ ಗೊತ್ತುಪಡಿಸಿದ್ದು , ಈ ಅವಧಿಯಲ್ಲಿ 50 ಸಾವಿರ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ತರಬೇತುಗೊಳಿಸಲಾಗುವುದು. ಉಳಿದ 5 ಲಕ್ಷ ಮಂದಿಗೆ ದೂರ ಶಿಕ್ಷಣ ಸೌಲಭ್ಯ ಕಲ್ಪಿಸಲಾಗುವುದು. ತಮ್ಮ ಮಕ್ಕಳಿಗೆ ನೆರವು ನೀಡಲು ಪೋಷಕರನ್ನು ತಲುಪುವ ಕಾರ್ಯಕ್ರಮಗಳನ್ನು ಕೂಡ ವಿಪ್ರೋ ಹೊಂದಿದೆ ಎಂದು ಕಂಪನಿಯ ಬ್ರಾಂಡ್‌ ಹಾಗೂ ವಾಣಿಜ್ಯ ಸಂಪರ್ಕಗಳ ಉಪಾಧ್ಯಕ್ಷ ವಿಜಯ್‌ ಕೆ.ಗುಪ್ತ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X