ರಾಮಮಂತ್ರವ ಜಪಿಸೋ ಹೇ ಮನುಜ : ಸಾಯಿಬಾಬಾ ಮಂತ್ರ
ಬೆಂಗಳೂರು : ರಾಮ ನಾಮ ಸ್ಮರಣೆ ಮಾಡಿರಿ. ಸಮಸ್ಯೆ ತಂತಾನೇ ಕರಗುತ್ತದೆ. ರಾಮ ನಾಮ ಮರೆತಿರುವುದೇ ಸಕಲ ಸಮಸ್ಯೆಗಳಿಗೂ ಕಾರಣ ಎಂದು ಸತ್ಯ ಸಾಯಿಬಾಬಾ ಅಭಿಪ್ರಾಯ ಪಟ್ಟಿದ್ದಾರೆ.
ವೈಟ್‌ಫೀಲ್ಡಿನ ಬೃಂದಾವನ ಆಶ್ರಮದಲ್ಲಿ ಭಾನುವಾರ ರಾಮನವಮಿ ಆಚರಣೆ. ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರ ಕುರಿತು ಸಾಯಿಬಾಬಾ ಹಿತ ವಚನಗಳನ್ನು ಬೋಧಿಸಿದರು....
ರಾಮ ನಾಮ ಸ್ಮರಣೆ ಮಾಡದಿರುವುದೇ ಇವತ್ತಿನ ಫ್ಯಾಷನ್ ಆಗಿದೆ. ಆದರೆ ರಾಮ ಎಂಬ ನಾದಪೂರ್ಣ ದನಿಯ ಶಕ್ತಿ ಅನನ್ಯ. ರಾಮ ನಾಮ ಸಕ್ಕರೆಗಿಂತ ಸಿಹಿ, ಕೆನೆ ಮೊಸರಿಗಿಂತ ರುಚಿ, ಗಟ್ಟಿ ಜೇನಿಗಿಂತ ಮಧುಭರಿತ, ಅಮೃತ ಅಥವಾ ದಿವ್ಯ ಮಕರಂದ. ಹಣ ಅಥವಾ ಅಧಿಕಾರ ಕಷ್ಟ ಕಾಲದಲ್ಲಿ ನೆರವಿಗೆ ಬರುವುದಿಲ್ಲ. ಭಗವಂತನ ಧ್ಯಾನದಿಂದ ಮಾತ್ರ ಸಮಸ್ಯೆ ಬಗೆಹರಿಸುವುದು ಸಾಧ್ಯ. ಜನ ಶಾಂತಿ- ನೆಮ್ಮದಿಯಿಂದ ಇರಬೇಕು. ಅದಕ್ಕೆ ಉತ್ತಮ ಆಡಳಿತ ಬೇಕು ಎಂಬುದನ್ನು ರಾಮಾಯಣ ಪ್ರತಿಪಾದಿಸುತ್ತದೆ. ಅದನ್ನೇ ಮರೆತಾಗ ಸಮಸ್ಯೆಗಳು ಬಿಗಡಾಯಿಸುತ್ತವೆ.
ರಾಮಾಯಣದ ಸಾರವನ್ನು ಜನರಿಗೆ ಉಪನ್ಯಾಸ ಮಾಡಿದ ಸಾಯಿಬಾಬ ಕೆಲವು ಭಜನೆಗಳನ್ನೂ ಹಾಡಿದ್ದು ರಾಮನವಮಿಯ ವಿಶೇಷ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications