ಕರ್ನಾಟಕ ಈಡಿಗ ಸಂಘದ ವತಿಯಿಂದ ಬೆಂಗಳೂರಿನಲ್ಲಿ ವೃದ್ಧಾಶ್ರಮ
ಬೆಂಗಳೂರು: ಕರ್ನಾಟಕ ಈಡಿಗ ಸಂಘದ ವತಿಯಿಂದ ವೃದ್ಧಾಶ್ರಮವೊಂದನ್ನು ಬೆಂಗಳೂರು ನಗರದಲ್ಲಿ ಆರಂಭಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಜೆ.ಪಿ. ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಮನೆ ಇಲ್ಲದ ಹಿರಿಯ ನಾಗರಿಕರಿಗೆ ಹಾಗೂ ನೆರವು ಅಗತ್ಯವಿರುವ ವೃದ್ಧರಿಗೆ ಈ ಆಶ್ರಮದಿಂದ ಪ್ರಯೋಜನವಾಗಲಿದೆ ಎಂದ ನಾರಾಯಣ ಸ್ವಾಮಿ, ಈಡಿಗರ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು. ವೃದ್ಧಾಶ್ರಮಕ್ಕಾಗಿ ಜಾಗ ಖರೀದಿ ಪ್ರಕ್ರಿಯೆ ನಡೆದಿದೆ. ಇವತ್ತು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ನಗರ ಪ್ರದೇಶಲ್ಲಿ ವೃದ್ಧಾಶ್ರಮಗಳ ಜರೂರತ್ತು ಇದೆ. ಆದ್ದರಿಂದ ವೃದ್ಧರಿಗೆ ನೆರವಾಗಲು, ಆಶ್ರಮ ತೆರೆಯಲು ಸಂಘ ಉದ್ದೇಶಿಸಿದೆ ಎಂದು ನಾರಾಯಣ ಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಸಂಜೆವಾಣಿ ಪ್ರಕಾಶನದ ಕಾರ್ಯನಿರ್ವಾಹಕ ಸಂಪಾದಕ ಬಿ.ಎಸ್. ಮಣಿ ಹಾಗೂ ಪ್ರಜಾವಾಣಿಯ ಮುಖ್ಯ ವರದಿಗಾರ ಇ.ವಿ. ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸತ್ಯನಾರಾಯಣ ಅವರು ಸಮಾಜದಲ್ಲಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಂಘದ ವತಿಯಿಂದ ಈ ಸಂದರ್ಭದಲ್ಲಿ 38 ಮಂದಿ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಹಾಗೂ 50 ಮಂದಿ ವಿದ್ಯಾರ್ಥಿಗಳಿ ವಿದ್ಯಾರ್ಥಿ ವೇತನ ನೀಡಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications